ಜಿಲ್ಲೆ

ಶಾಲಾ ವಾಹನದ ರೇಡಿಯೇಟರ್​ ಸ್ಫೋಟ; ನಾಲ್ವರು ವಿದ್ಯಾಥಿರ್ಗಳಿಗೆ ಗಾಯ

ಹುಬ್ಬಳ್ಳಿ: ಖಾಸಗಿ ಶಾಲೆಯ ಮಿನಿ ವ್ಯಾನ್​ವೊಂದರ ರೇಡಿಯೇಟರ್​ ಸ್ಫೋಟಗೊಂಡ ಪರಿಣಾಮ ನಾಲ್ವರು ಶಾಲಾ ಮಕ್ಕಳು ಗಾಯಗೊಂಡ ಟನೆ ಸೆಂಟ್ರಲ್​ *ಎಕ್ಸಸ್​ ಕಾಲನಿಯಲ್ಲಿ ಮಂಗಳವಾರ ಸಂಭವಿಸಿದೆ.
ಶಾಲೆ ಅವಧಿ ಮುಗಿದ ಬಳಿಕ ಟಾಟಾ ಮ್ಯಾಜಿಕ್​ ವ್ಯಾನ್​ನ ಚಾಲಕ ಶಂಕ್ರಪ್ಪ ಎಂದಿನಂತೆ 12 ಮಕ್ಕಳನ್ನು ಸಂಜೆ ವ್ಯಾನ್​ನಲ್ಲಿ ಕರೆದುಕೊಂಡು ಹೊರಟಿದ್ದ. ಈ ವೇಳೆ ಆಕಸ್ಮಿಕವಾಗಿ ರೇಡಿಯೇಟರ್​ ಸ್ಫೋಟಗೊಂಡಿದೆ. ಪರಿಣಾಮ ಮುಂದೆ ಕುಳಿತಿದ್ದ ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳಿಯರ ನೆರವಿನಿಂದ ಸ್ಥಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗೋಕುಲ ರೋಡ್​ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ರೇಣುಕಾ ನಗರದ ಬಳಿ ಎತ್ತರದ ರಸ್ತೆ ಏರುವಾಗ ಒತ್ತಡ ಹೆಚ್ಚಾಗಿದ್ದರಿಂದ ರೇಡಿಯೇಟರ್​ ಸ್ಫೋಟಗೊಂಡಿದೆ ಎನ್ನಲಾಗಿದೆ. ವ್ಯಾನ್​ ವಶಕ್ಕೆ ಪಡೆದಿದ್ದು, ಈ ಕುರಿತು ಯಾರೂ ದೂರು ನೀಡಿಲ್ಲ. ಆದರೂ ಪರಿಶೀಲಿಸಲಾಗುತ್ತಿದೆ ಎಂದು ಇನ್​ಸ್ಪೆಕ್ಟರ್​ ಜೆ.ಎಂ.ಕಾಲಿಮಿಚಿರ್ ತಿಳಿಸಿದರು.