ಗಂಡಸಿ : ಮಳೆಗಾಲ ಬಂದರೆ ಸಾಕು ಗೋಡೆಗಳ ಬಿರುಕಿನಿಂದ ಮಳೆ ನೀರು ಒಳ ಪ್ರವೇಶ ಮರದ ಕಿಟಕಿ, ಬಾಗಿಲು, ಮೇಲ್ಚಾವಣಿ ಗೆದ್ದಲು ತಿಂದಿದ್ದು ಸುಣ್ಣ-ಬಣ್ಣ ಕಂಡು ವರ್ಷಗಳೇ ಕಳೆದಿವೆ ಹೊಸದಾಗಿ ಶಾಲಾ ಮುಂಭಾಗದಲ್ಲಿ ಸಂಚರಿಸುವ ವ್ಯಕ್ತಿಗಳಿಗೆ ಶಿಥಿಲಾವಸ್ತೆ ತಲುಪಿರುವ ಯಾರು ವಾಸವಿಲ್ಲದ ಹಳೆ ಮನೆಯಂತೆ ಬಾಸವಾಗುವ ದುಸ್ಥಿತಿಗೆ ತಲುಪಿದ್ದ ಹೋಬಳಿಯ ಬಾಚೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಪುನರ್ ಚೇತನ ನೀಡಿದ ಶಾಲೆಯ ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು. ತಾವು ಓದಿದ ಶಾಲೆಯ ದುಸ್ಥಿತಿ ಕಂಡು ಮುರುಗಿದ ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಜನವರಿ 2025ರಂದು ಸಭೆ ಸೇರಿ ತಮ್ಮ ಗ್ರಾಮದ ಶಾಲೆಯಲ್ಲಿ ಜೀವಭಯದಲ್ಲೇ ಮಕ್ಕಳು ಪಾಠ ಕೇಳುವ ಪರಿಸ್ಥಿತಿ ಇದ್ದು ಅಪಾಯ ಸಂಭವಿಸುವ ಮುನ್ನ ಶಾಲಾ ಕಟ್ಟಡ ರಿಪೇರಿ ಮಾಡಿಸಲು ನಿರ್ಣಯ ತೆಗೆದು ಕೊಂಡು ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ತಮ್ಮ ಶಕ್ತಿಗೆ ಅನುಗುಣವಾಗಿ ದೇಣಿಗೆ ನೀಡಿದ್ದು 10 ಲಕ್ಷ ರೂ. ವೆಚ್ಚದಲ್ಲಿ ಶಾಲೆಗೆ ಕಬ್ಬಿಣದ ಮೇಲ್ಚಾವಣಿ, ಕಿಟಕಿ, ಬಾಗಿಲು, ನೆಲಕ್ಕೆ ಟೈಲ್ಸ್, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಶಾಲೆಯ ಕೊಠಡಿಗಳು ಮತ್ತು ಕಾಂಪೌಂಡಿಗೆ ಪೇಂಟ್ ಮಾಡಿಸಲಾಗಿದ್ದು ಎಲ್ಲಾ ರೀತಿಯ ರಿಪೇರಿ ಕಾರ್ಯ ಪೂರ್ಣಗೊಂಡು. ಹಿರಿಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಪುನರ್ ಚೇತನಗೊಂಡ ಶಾಲಾ ಕಟ್ಟಡಗಳನ್ನು ಭಾನುವಾರ ಮಧ್ಯಾಹ್ನ ಹೆಗ್ಗಟ್ಟ ಗ್ರಾ.ಫಂ. ಅಧ್ಯಕ್ಷ ಮಂಜಪ್ಪ ಉದ್ಘಾಟಿಸಿದರು.