ಸೂಲಿಬೆಲೆಯಲ್ಲಿ ಸುರಿದ ಮಳೆಯಿಂದ ವಿವೇಕಾನಂದ ಶಾಲೆಯ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿ ಮುಂದಿನ ಬೇಕರಿ ಮೇಲೆ ಬಿದ್ದಿರುವುದು. 
ಜಿಲ್ಲೆ

ಸೂಲಿಬೆಲೆಯಲ್ಲಿ ಹಾರಿದ ಶಾಲೆ ಛಾವಣಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಸೂಲಿಬೆಲೆ : ಸೂಲಿಬೆಲೆಯಲ್ಲಿ ಗುಡುಗು, ಸಿಡಿಲು ಗಾಳಿ ಸಮೇತವಾಗಿ ಮರುಣರಾಯ ಆರ್ಭಟಿಸಿದ್ದು, ಜನ ಕ್ಷಣ ಕಾಲ ಕಂಗಾಲಾಗಿದ್ದರು. ಶನಿವಾರ ಮಧ್ಯಾಹ್ನ 3.30 ಸಮಯದಲ್ಲಿ ಗಾಳಿ ಸಮೇತವಾಗಿ ಕಾಣಿಸಿಕೊಂಡ ಭಾರಿ ಮಳೆಯಿಂದಾಗಿ ಮರಗಳು ಉರುಳಿ ಬಿದ್ದಿದ್ದು, ಇಲ್ಲಿನ ವಿವೇಕಾನಂದ ಶಾಲೆಯ 2 ಕೊಠಡಿಗಳ ಮೇಲ್ಛಾವಣಿಗಳು ಹಾರಿಹೋಗಿ, ಶಾಲೆ ಮುಂದಿನ ಬೇಕರಿ ಮೇಲೆ ಬಿದ್ದು ಹೆಚ್ಚಿನ ಹಾನಿಮಾಡಿವೆ. ಸತತ 3 ತಾಸುಗಳ ಕಾಲ ಸುರಿದ ಮಳೆಯಿಂದ ಜನ ಹೊರಗೆ ಬರಲಾರದ ಸ್ಥಿತಿಯಲ್ಲಿದ್ದರು. ಇದೇ ಸಮಯದಲ್ಲಿ ವಿದ್ಯುತ್​ ಕಡಿತವಾಗಿ, ಜನಜೀವನ ಅಸ್ತವ್ಯಸ್ಥವಾಗಿತ್ತು.