ಜಿಲ್ಲೆ

ಪ್ರಜಾಪ್ರಭುತ್ವದ ಅರಿವಿಗಾಗಿ ಶಾಲಾ ಸಂಸತ್​: ಐ.ಬಿ. ಬೆನಕೊಪ್ಪ

ವಿಜಯವಾಣಿ ಸುದ್ದಿಜಾಲ ಗದಗ
ದೇಶದ ಪ್ರಜಾಪ್ರಭುತ್ವವನ್ನು ಮಕ್ಕಳು ಅನುಸರಿಸುವ ನಿಟ್ಟಿನಲ್ಲಿ ಮತ್ತು ಶಾಲೆಯಲ್ಲಿ ಚುನಾವಣೆಯ ಬಗ್ಗೆ ಅರಿವು ಮೂಡಿಸಲು ಶಾಲಾ ಸಂಸತ್​ ರಚನೆ ಮಾಡಲಾಗುತ್ತದೆ ಎಂದು ನಿವೃತ್ತ ಡಿಡಿಪಿಐ ಐ.ಬಿ. ಬೆನಕೊಪ್ಪ ಹೇಳಿದರು.
ನಗರದ ತೋಂಟದಾರ್ಯ ವಿದ್ಯಾಪಿಠದ ಬಸವೇಶ್ವರ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಶಾಲಾ ಸಂಸತ್​ ಮತ್ತು ಸಾಂಸತಿಕ ಚಟುವಟಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಸಂಸತ್​ ರಚನೆಯಿಂದ ಶಾಲೆ ಪ್ರಾರಂಭವಾಗುತ್ತದೆ. ಶಾಲೆಯ ಚಟುವಟಿಕೆಗಳಿಗೆ ಪೂರ್ವ ಇದು ಸಿದ್ಧತೆಯಾಗಿದೆ. ಶಾಲೆಯ ವಿದ್ಯಾಥಿರ್ಗಳು ಸೂಕ್ತ ಅಭ್ಯಥಿರ್ಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಡುತ್ತಾರೆ. ಇಲ್ಲಿ ಸಹಕಾರ ಮತ್ತು ಜವಾಬ್ದಾರಿ ಮುಖ್ಯವಾಗಿರುತ್ತದೆ. ಸಂವಿಧಾನದ ಆಶಯಗಳನ್ನು ಈಡೇರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಸಂಸತ್​ ಪ್ರಮಾನವಚನ ಬೊಧಿಸಲಾಯಿತು.
ಶಹರ ವಲಯದ ಸಂಪನ್ಮೂಲ ವ್ಯಕ್ತಿ ವಿದ್ಯಾವತಿ ಗಡ್ಡಾಳೆ, ಎಸ್​.ಆರ್​. ಗಿಡ್ಡಕೆಂಚಣ್ಣವರ, ಎಲ್​. ವಿ. ಕಾಲವಾಡ, ಎಸ್​ ಎನ್​ ಹಿರೇಮಠ, ಎಸ್​.ಎಂ. ತುಪ್ಪದ ಉಪಸ್ಥಿತರಿದ್ದರು.