ಜಿಲ್ಲೆ

ಶಾಲಾ ಸಂಸತ್​ ಚುನಾವಣೆ

Dharwada - Vikram Nadiger

ಧಾರವಾಡ: ತಾಲೂಕಿನ ಗೋವನಕೊಪ್ಪದ ಶ್ರೀ ಎಂ.ವೈ. ನಲವಡಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಶಾಲಾ ಸಂಸತ್​ ಚುನಾವಣೆ ನಡೆಸಲಾಯಿತು.
ಶಾಲಾ ಪ್ರಧಾನಿಯಾಗಿ ಕಾಶಿನಾಥ ಮಾದರ, ಮಹಿಳಾ ಪ್ರತಿನಿಧಿಯಾಗಿ ಸೃಷ್ಟಿ ಮಣ್ಣೂರಮಠ, ಮಂತ್ರಿಗಳಾಗಿ ರೋಹಿತ್​ ಬಾರನ್ನವರ, ಪ್ರೀತಿ ಗೌಡರ, ಗೌರಮ್ಮ ಉಪ್ಪಾರ, ಸಾಗರದೀಪ ಹಂಚಿನಮನಿ, ಪ್ರಜ್ವಲ್​ ಅಮರಗೋಳ, ಅಂಕಿತ ತಳವಾರ ಆಯ್ಕೆಯಾಗಿದ್ದಾರೆ. ಮುಖ್ಯೋಪಾಧ್ಯಾಯ ವೈ.ಜಿ. ತೊನಶ್ಯಾಳ, ಎಂ.ಎಸ್​. ಹಾಲಶೆಟ್ಟಿ. ಎಸ್​.ಎಂ. ಬಿರಾದಾರ, ಆರ್​.ಸಿ. ರೊಟ್ಟಿವಾಡ, ಎ.ಎಚ್​. ಕುಲಕಣಿರ್, ಸಿ.ಬಿ. ಇಂಡಿ, ಎನ್​.ಜಿ . ಪಾಟೀಲ, ಬಿ.ಡಿ. ಜಾಲವಾದಿ, ವಿ.ಸಿ. ಮಸೂತಿ, ಇತರರು ಇದ್ದರು.