ಬಸವನಬಾಗೇವಾಡಿ: ಪಟ್ಟಣ ಸೇರಿ ತಾಲೂಕಿನಾದ್ಯಂತ ಪ್ರಾಥಮಿಕ, ಪ್ರೌಢಶಾಲೆಗಳ ಶೈಕ್ಷಣಿ ವರ್ಷದ ಆರಂಭೋತ್ಸವ ಸಂಭ್ರಮದಿಂದ ನಡೆಯಿತು.
ಶಾಲೆಗಳನ್ನು ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಬಳಿಕ ಸರಸ್ವತಿ ಮೂರ್ತಿಗೆ ಪೂಜೆ ಸಲ್ಲಿಸಿ ತರಗತಿಗಳನ್ನು ಆರಂಭಿಸಲಾಯಿತು.
ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹೂಗುಚ್ಛ ನೀಡಿ ಸ್ವಾಗತಿಸಿಕೊಂಡು ಸಿಹಿ ಹಂಚಿದರು. ಬಳಿಕ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ನೀಡಲಾಯಿತು.
ತಾಲೂಕಿನ ಹುಣಶ್ಯಾಳ ಪಿ.ಬಿ. ಗ್ರಾಮದಲ್ಲಿರುವ ಸರ್ಕಾರಿ ಆದರ್ಶ ಶಾಲೆಯಲ್ಲಿ ಸರಸ್ವತಿ ಮೂರ್ತಿಗೆ ಪೂಜೆ ಸಲ್ಲಿಸಿ ಶಾಲೆ ಆರಂಭಿಸಲಾಯಿತು.
ಮುಖ್ಯಶಿಕ್ಷಕ ಸುಭಾಸ ಹರಿಜನ ಮಾತನಾಡಿದರು. ಶಾಲಾ ಸಲಹಾ ಸಮಿತಿ ಅಧ್ಯಕ್ಷ ಆನಂದ ಸಜ್ಜನ, ಸದಸ್ಯರಾದ ಪ್ರಕಾಶ ಬೆಣ್ಣೂರ, ರಮೇಶ ಮೊಕಾಶಿ, ಸತೀಶ ಬಿರಾದಾರ, ರೇಣುಕಾ ವನರೊಟ್ಟಿ, ಸದಾಶಿವ ಆಲೂರ, ಶಿಕ್ಷಕರಾದ ಸಚಿನ್ ಹನಗಂಡಿ, ವೀಣಾ ಚವಾಣ್, ಸೌಮ್ಯ ಗುಡ್ಡದ, ದೀಪಿಕಾ ಕನಮಡಿ, ರೂಪಾ ಹಯ್ಯಳ, ಸಿದ್ದು ಗಂಗನವರ, ಮಾಧವಿ ಸುರಪುರ, ನೀಲಾಬಾಯಿ ಪವಾರ ಇತರರಿದ್ದರು.