ಬಳ್ಳಾರಿಯ ಆದರ್ಶ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಕ್ಲಬ್ ರಚನೆ ಕಾರ್ಯಕ್ರಮವನ್ನು ಕ್ರೀಮ್ ಯೋಜನೆಯ ಜಿಲ್ಲಾ ಸಂಯೋಜಕ ಗಣೇಶ್ ಉದ್ಘಾಟಿಸಿದರು.  
ಜಿಲ್ಲೆ

ಶಾಲೆಗೊಂದು ಮಕ್ಕಳ ಸಂಘ ರಚನೆ: ಕ್ರೀಮ್ ಯೋಜನೆಯ ಬಳ್ಳಾರಿ ಜಿಲ್ಲಾ ಸಂಯೋಜಕ ಗಣೇಶ್ ಹೇಳಿಕೆ

ಬಳ್ಳಾರಿ: ಶಾಲೆಗೊಂದು ಮಕ್ಕಳ ಹಕ್ಕುಗಳ ಕ್ಲಬ್ (ಮಕ್ಕಳ ಸಂಘ) ರಚಿಸಲಾಗುತ್ತಿದೆ ಎಂದು ಕ್ರೀಮ್ ಯೋಜನೆಯ ಜಿಲ್ಲಾ ಸಂಯೋಜಕ ಗಣೇಶ್ ಹೇಳಿದರು.

ನಗರದ ಆದರ್ಶ ವಿಶ್ವವಿದ್ಯಾಲಯದಲ್ಲಿ ಡಾನ್‌ಬಾಸ್ಕೋ ಸಂಸ್ಥೆ, ಕ್ರೀಮ್ (ಮಕ್ಕಳ ಹಕ್ಕುಗಳ ಶಿಕ್ಷಣ ಮತ್ತು ಸಕ್ರಿಯ ಸಂಚಲನ) ಯೋಜನೆ ಹಾಗೂ ಸರ್ಕಾರಿ ಪ್ರೌಢಶಾಲೆ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಕ್ಲಬ್ ರಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ಮಕ್ಕಳ ಸಂಖ್ಯೆ ಶೇ.42 ಇದೆ. ಮಕ್ಕಳು ಮುಕ್ತ ವಾತಾವರಣದಲ್ಲಿ ಬೆಳೆಯಬೇಕು. ಯಾವುದೇ ತಾರತಮ್ಯಕ್ಕೆ ಒಳಗಾಗಬಾರದು. ಈ ನಿಟ್ಟಿನಲ್ಲಿ ಹತ್ತು ಹಲವು ಕ್ರಿಯಾಶೀಲ ಮತ್ತು ವಿಭಿನ್ನ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಆದರ್ಶ ವಿಶ್ವವಿದ್ಯಾಲಯದ ಮುಖ್ಯಶಿಕ್ಷಕ ಆಂಜನೇಯ ಮಾತನಾಡಿ, ಮನೆ, ಶಾಲೆ ಮತ್ತು ಸಮುದಾಯಗಳ ಒಳ-ಹೊರಗೂ ಮಕ್ಕಳಿಗೆ ಸಮಾನ ಅವಕಾಶಗಳು ದೊರೆಯಬೇಕು. ಪ್ರತಿ ಮಗು ಗೌರವಯುತ ಬಾಲ್ಯ ಕಳೆಯುತ್ತ ಭವಿಷ್ಯದ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.