ಜಿಲ್ಲೆ

ಗುಂಡಿಗೆ ಮಣ್ಣು ಹಾಕಿ ಅನುಕೂಲ ಕಲ್ಪಿಸಿದ ಶಾಲಾ ಮಕ್ಕಳು

Gadag - Desk - Tippanna Avadoot

ಕಲಘಟಗಿ: ತಾಲೂಕಿನ ತುಮರಿಕೊಪ್ಪಹುಲ್ಲಂಬಿ- ಧಾರವಾಡ ರಸ್ತೆ ನಡುವೆ ಗುಂಡಿಗಳು ಬಿದ್ದಿದ್ದವು. ಇದನ್ನು ಗಮನಿಸಿದ ಶಾಲಾ ಮಕ್ಕಳು ಗುಂಡಿಗೆ ಮಣ್ಣು ಹಾಕಿ ಅನುಕೂಲ ಕಲ್ಪಿಸಿದ್ದಾರೆ.

ತುಮರಿಕೊಪ್ಪ ಗ್ರಾಮದಲ್ಲಿನ ಸೆಂಟ್ ಝೇವಿಯರ್ ಪ್ರೌಢಶಾಲೆೆಗೆ ನಿತ್ಯ ನೂರಾರು ವಿದ್ಯಾರ್ಥಿಗಳು ಕಲಘಟಗಿ, ಬೇಗೂರು, ಬಿಸರಳ್ಳಿ, ಹುಲಗಿನಕಟ್ಟಿ, ಮುತ್ತಗಿ, ಹುಲ್ಲಂಬಿ ಸೇರಿ ಅನೇಕ ಗ್ರಾಮಗಳಿಂದ ಆಗಮಿಸುತ್ತಾರೆ. ಇನ್ನು ಕೆಲ ಮಕ್ಕಳು ಸೈಕಲ್ ತೆಗೆದುಕೊಂಡು ಬರುತ್ತಾರೆ. ಕೆಲವು ದಿನಗಳ ಹಿಂದಷ್ಟೇ ವಿದ್ಯಾರ್ಥಿಯೊಬ್ಬರು ಸೈಕಲ್ ಮೇಲಿಂದ ಬಿದ್ದು ಗಾಯ ಮಾಡಿಕೊಂಡಿದ್ದರು. ಇದನ್ನೆಲ್ಲ ಅರಿತು ವಿದ್ಯಾರ್ಥಿಗಳು ತಮ್ಮ ಶಾಲಾ ಸಮಯ ಮುಗಿದ ನಂತರ ಸ್ವಯಂ ಪ್ರೇರಿತರಾಗಿ ಗುಂಡಿಗೆ ಮಣ್ಣು ಹಾಕಿದ್ದಾರೆ.