ಜಿಲ್ಲೆ

ಭತ್ತ ಕಟಾವು ಮಾಡಿದ ಶಾಲಾ ಮಕ್ಕಳು

ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಪಂ ವ್ಯಾಪ್ತಿಯ ಹುಲ್ಕುತ್ರಿ ಶಾಲಾ ವಿದ್ಯಾರ್ಥಿಗಳು ನಿಸರ್ಗ ಇಕೋ ಕ್ಲಬ್ ಅಡಿಯಲ್ಲಿ ತಾವೇ ನಾಟಿ ಮಾಡಿದ ಗದ್ದೆಯನ್ನು ಕೊಯ್ಲು ಮಾಡುವ ಮೂಲಕ ಸಂಪೂರ್ಣ ಕೃಷಿ ಅಧ್ಯಯನದ ಅನುಭವ ಪಡೆದರು.

ಆಗಸ್ಟ್ 12ರಂದು ಗದ್ದೆ ನಾಟಿ ಮಾಡಿದ್ದ ಶಾಲಾ ವಿದ್ಯಾರ್ಥಿಗಳು ಈಗ ಕೊಯ್ಲು ಮಾಡುವ ಮೂಲಕ ಕೃಷಿ ಚಟುವಟಿಕೆಯ ಪ್ರಾಯೋಗಿಕ ಅನುಭವ ಪಡೆದರು.

ಶಾಲೆಯ 6 ಮತ್ತು 7ನೇ ತರಗತಿಯ 16 ವಿದ್ಯಾರ್ಥಿಗಳು ಹೆಮಜೆನಿಯ ಲೋಕೇಶ ಪದ್ಮನಾಭ ಗೌಡ ಇವರ ಗದ್ದೆಯಲ್ಲಿ ದೀಪ ಬೆಳಗುವ ಮೂಲಕ ಎಸ್​ಡಿಎಂಸಿ ಅಧ್ಯಕ್ಷ ಸುರೇಶ ಬಂಗಾರ್ಯ ಗೌಡ ಕೊಯ್ಲಿಗೆ ಚಾಲನೆ ನೀಡಿದರು. ನಂತರ ಮಕ್ಕಳಿಗೆ ಕತ್ತಿ ಹಿಡಿಯುವ ಬಗೆ, ತೆನೆಯನ್ನು ಹದೆ ಹಾಕುವ ರೀತಿಯನ್ನು ಲೋಕೇಶ ಪದ್ಮನಾಭ ಗೌಡ, ಗಣಪತಿ ಕೃಷ್ಣ ಗೌಡ ತಿಳಿಸಿಕೊಟ್ಟರು.

ಶಾಲಾ ಮುಖ್ಯ ಶಿಕ್ಷಕ ದರ್ಶನ ಹರಿಕಾಂತ, ಸಹಶಿಕ್ಷಕಿ ನಾಗರತ್ನ ಭಂಡಾರಿ, ಅಣ್ಣಪ್ಪ ಭೈರ್ಯ ಗೌಡ, ಲಕ್ಷ್ಮಣ ಭೈರ್ಯ ಗೌಡ, ನಿತ್ಯಾನಂದ ಗೌಡ, ಹೇಮಂತ ಗೌಡ ಹಾಗೂ ಮತ್ತಿತರರು ಮಕ್ಕಳಿಗೆ ಮಾರ್ಗದರ್ಶನ ನೀಡಿದರು