ಜಿಲ್ಲೆ

ಶಾಲಾ ಮಕ್ಕಳ ಅಕ್ಷರ ದಾಸೋಹದ ಪಡಿತರ ಕಳ್ಳತನ

Haveri - Kariyappa Aralikatti


ಹಾವೇರಿ: ಶಾಲೆಯ ಅಕ್ಷರ ದಾಸೋಹ ಕೊಠಡಿಯ ಬೀಗ ಮುರಿದು ೭ ಸಾವಿರ ರೂ. ಮೌಲ್ಯದ ಪಡಿತರ ಕಳ್ಳತನ ಮಾಡಿದ ಘಟನೆ ತಾಲೂಕಿನ ಕನವಳ್ಳಿ ಸರ್ಕಾರಿ ಕನ್ನಡ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದಿದೆ.
ಶಾಲೆಯಲ್ಲಿ ಯಾರೂ ಇಲ್ಲದಿದ್ದಾಗ ಸಂಜೆ ಒಳಗೆ ನುಗ್ಗಿದ ಖದೀಮರು ದಾಸೋಹ ಕೊಠಡಿಯ ಬೀಗ ಮುರಿದು ೮೦ ಕೆ.ಜಿ. ಅಕ್ಕಿ, ೨೦ ಕೆ.ಜಿ. ಹಾಲಿನ ಪುಡಿ, ತೂಕದ ಯಂತ್ರ ಸಹ ದೋಚಿದ್ದಾರೆ. ಘಟನಾ ಸ್ಥಳಕ್ಕೆ ಗುತ್ತಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.