ಬಳ್ಳಾರಿಯ ಮೂರನೇ ವಾರ್ಡ್ ಒಳಚರಂಡಿ ಕಾಮಗಾರಿಯನ್ನು ಶಾಸಕ ನಾರಾ ಭರತರೆಡ್ಡಿ ಪರಿಶೀಲಿಸಿದರು. ಪಾಲಿಕೆ ಸದಸ್ಯರಾದ ಎಂ.ಪ್ರಭಂಜನ ಕುಮಾರ, ಎಂ.ರಾಜೇಶ್ವರಿ, ನೂರ ಮೊಹಮ್ಮದ್, ಮಿಂಚು ಸೀನು ಇತರರಿದ್ದರು. 
ಜಿಲ್ಲೆ

ಶಾಲಾ ಕಟ್ಟಡ ಮರು ನಿರ್ಮಾಣಕ್ಕೆ ಯೋಜನೆ

ಗಾಯತ್ರಿ ಮಾಲಿಪಾಟೀಲ್

ಬಳ್ಳಾರಿ: ನಗರದ ಮೂರನೇ ವಾರ್ಡ್ ವ್ಯಾಪ್ತಿಯ ವಿ.ಎನ್.ಲಾಲ್ ಕಮಾನ್ ಬೀದಿಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕಟ್ಟಡ ಮರು ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ಶಾಸಕ ನಾರಾ ಭರತರೆಡ್ಡಿ ಹೇಳಿದರು. ನಗರದ ಮೂರನೇ ವಾರ್ಡ್‌ಗೆ ಸಲಾಂ ಬಳ್ಳಾರಿ ಅಭಿಯಾನದ ನಿಮಿತ್ತ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಒಂದು ಕೋಟಿ ರೂ.ವೆಚ್ಚದಲ್ಲಿ ಶಾಲಾ ಕಟ್ಟಡದ ಮರು ನಿರ್ಮಾಣ ಮಾಡಲಾಗುವುದು ಎಂದರು. ಪಾಲಿಕೆ ಸದಸ್ಯ ಎಂ.ಪ್ರಭಂಜನ ಕುಮಾರ ಇತರರಿದ್ದರು.