ಶ್ರೀ ಪಂಜಂದಾಯ, ಬಂಟ, ವೈದ್ಯನಾಥ, ಆದಿ ಕೊರಗತನಿಯ ಸೇವಾ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕೊಡೆ ವಿತರಿಸಲಾಯಿತು.  
ಜಿಲ್ಲೆ

ಕೊರಗತನಿಯ ಆದಿಸ್ಥಳದಲ್ಲಿ ಬ್ಯಾಗ್, ಕೊಡೆ ವಿತರಣೆ

ಸೌಮ್ಯ ಆರ್

ಉಳ್ಳಾಲ: ಶ್ರೀ ಪಂಜಂದಾಯ, ಬಂಟ, ವೈದ್ಯನಾಥ, ಆದಿ ಕೊರಗತನಿಯ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಪಂಜಂದಾಯ ದೈವದ ಸೇವೆ ಮಾಡುವ ಕುಟುಂಬ ಹಾಗೂ ಬಡ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕೊಡೆ ವಿತರಣಾ ಕಾರ್ಯಕ್ರಮ ಕೊರಗತನಿಯ ಆದಿಸ್ಥಳ ಶ್ರೀ ಕೊರಗತನಿಯ ಆದಿಸ್ಥಳ ದೆಕ್ಕಾಡಿನ ಆಡಳಿತ ಕಚೇರಿಯಲ್ಲಿ ಶುಕ್ರವಾರ ನಡೆಯಿತು.

ಅಂಗನವಾಡಿಯಿಂದ ಪದವಿ ತನಕ ಕಲಿಯುತ್ತಿರುವ ಅರ್ಹ 105 ವಿದ್ಯಾರ್ಥಿಗಳಿಗೆ ಕೊಡೆ ಮತ್ತು ಬ್ಯಾಗ್ ವಿತರಿಸಲಾಯಿತು. ಕ್ಷೇತ್ರದ ಆಡಳಿತ ಮೊಕ್ತೇಸರ ಬಿ.ಶ್ರೀಧರ್ ಶೆಟ್ಟಿ ಮಾಗಣ್ತಡಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಟ್ರಸ್ಟ್‌ನ ಅಧ್ಯಕ್ಷ ಜಯರಾಮ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಹಾಬಲ ಹೆಗ್ಡೆ, ಗೇಣಿಮನೆ ಪದ್ಮನಾಭ ಶೆಟ್ಟಿ, ಮಿತ್ತಗೆಲ ಸತೀಶ್, ಭಂಡಾರ ಮನೆ ದಾಮೋದರ್ ಪೂಜಾರಿ, ದೆಪ್ಪೆಲಿಮಾರ್ ರಘುಪತಿ, ಕಂಪ ಬಾಲಕೃಷ್ಣ ಮೂಲ್ಯ, ದೈವದ ಪಾತ್ರಿ ಮಾಯಿಲ ಮೊದಲಾದವರು ಉಪಸ್ಥಿತರಿದ್ದರು.