ಜಿಲ್ಲೆ

ಹಿರೇಗೌಡ್ರ ಶಾಲೆ ವಾರ್ಷಿಕೋತ್ಸವ

Dharwada - Basavaraj Idli

ಹುಬ್ಬಳ್ಳಿ: ಕುಂದಗೋಳ ತಾಲೂಕಿನ ರೊಟ್ಟಿಗವಾಡದ ಗ್ರುಪ್ ಎಜುಕೇಶನ್ ಕಮಿಟಿಯ ಜಿ.ಕೆ. ಹಿರೇಗೌಡ್ರ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಫೆ. 21ರಂದು ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.

ಬಿಇಒ ಮಹಾದೇವಿ ಮಾಡಲಗೇರಿ, ಡಾ. ಯಲ್ಲಮ್ಮ ಮುಳಗುಂದ ಅತಿಥಿಗಳಾಗಿ ಪಾಲ್ಗೊಳ್ಳುವರು. ಎಲ್.ಡಿ. ಕರಿದ್ಯಾಮನಗೌಡ್ರ ಅಧ್ಯಕ್ಷತೆ ವಹಿಸುವರು. ಆರ್.ಎಸ್. ಕರಿದ್ಯಾಮನಗೌಡ್ರ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.