ಜಿಲ್ಲೆ

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ -  ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ

Mangaluru - Nishantha Narayana

ಪುತ್ತೂರು: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಖಾಸಗಿ ಶಾಲೆಗಳಲ್ಲಿ ಮಾತ್ರ ಸಿಗುವುದೆಂಬ ಭಾವನೆಯಿಂದ ಪಾಲಕರು ಹೊರಬರಬೇಕಾಗಿದೆ. ಪ್ರಾಥಮಿಕ ಹಂತದಲ್ಲಿ ಗುಣಮಟ್ಟದ ಶಿಕ್ಷಣ ದೊರೆತಾಗ ಮಕ್ಕಳ ಭವಿಷ್ಯದ ತಳಪಾಯ ಭದ್ರವಾಗಲಿದೆ. ಬಡತನ ವಿದ್ಯೆಗೆ ಅಡ್ಡಿಯಾಗುವುದಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಮೊಟ್ಟೆತ್ತಡ್ಕ ಕೆಮ್ಮಿಂಜೆ ಪಿಎಂಶ್ರೀ ಶಾಲೆಯಲ್ಲಿ ತಾಲೂಕುಮಟ್ಟದ ಶಾಲಾ ಪ್ರಾರಂಭೋತ್ಸಕ್ಕೆ ಚಾಲನೆ ನೀಡಿ, ಮಕ್ಕಳಿಗೆ ಪುಸ್ತಕ, ಸಮವಸ್ತ್ರ ವಿತರಿಸಿ ಮಾತನಾಡಿದರು.

ನಗರ ಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಶುಭಹಾರೈಸಿದರು. ಎಸ್‌ಡಿಎಂಸಿ ಅಧ್ಯಕ್ಷ ಮೋಹನ್ ಅಮ್ಮುಂಜೆ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಕ್ಷೇತ್ರ ಸಮನ್ವಯಾಧಿಸಚಹಕಾರಿ ನವೀನ್ ಸ್ಟಿ-ನ್ ವೇಗಸ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಮುಖ್ಯಶಿಕ್ಷಕ ಸಂತೋಷ್ ಉಪಸ್ಥಿತರಿದ್ದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಶಿಕಲಾ ಸ್ವಾಗತಿಸಿದರು. ಶಿಕ್ಷಕಿ ಅರ್ಚನಾ ವಂದಿಸಿದರು. ಶಿಕ್ಷಕಿ ಸುಮತಿ ನಿರೂಪಿಸಿದರು.

ಕಾದು ಕುಳಿತ ವಿದ್ಯಾರ್ಥಿಗಳು!

ತಾಲೂಕುಮಟ್ಟದ ಶಾಲಾ ಪ್ರಾರಂಭೋತ್ಸವಕ್ಕೆ ಅಽಕಾರಿಗಳು ಹಾಗೂ ಜನಪ್ರತಿನಿಽಗಳೇ ವಿಘ್ನವಾಗಿದ್ದಾರೆ. ೯.೩೦ಕ್ಕೆ ಪ್ರಾರಂಭವಾಗಬೇಕಾದ ಕಾರ್ಯಕ್ರಮ ೧೧ ಗಂಟೆಗೆ ಶುರುವಾಗುವಂತಾಗಿದೆ. ೯.೪೫ರ ಹೊತ್ತಿಗೆ ಕ್ಷೇತ್ರ ಶಿಕ್ಷಣಾಽಕಾರಿ ಆಗಮಿಸಿ, ಒಂದು ಹಂತದ ಕಾರ್ಯಕ್ರಮ ಮುಗಿಯಿತು. ಸುಮಾರು ೧೦.೪೫ರ ಹೊತ್ತಿಗೆ ಜನಪ್ರತಿನಿಽಗಳು ಒಬ್ಬೊಬ್ಬರಾಗಿ ಆಗಮಿಸತೊಡಗಿದರು. ಅವರಿಗಾಗಿ ಕಾರ್ಯಕ್ರಮಗಳನ್ನು ಮರುಸೃಷ್ಟಿಸಬೇಕಾಯಿತು.