ಜಿಲ್ಲೆ

ಸಮರ್ಥ ಪಪೂ ಕಾಲೇಜಿನಲ್ಲಿ ಸ್ಕಾಲರ್​ಶಿಪ್ ಪರೀಕ್ಷೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಇಲ್ಲಿನ ವಿದ್ಯಾನಗರ ಶಿರೂರ ಪಾರ್ಕ್​ನ ಸಮರ್ಥ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಡಿ. 22ರಂದು ಬೆಳಗ್ಗೆ 10 ಗಂಟೆಗೆ ಧಾರವಾಡ ಜಿಲ್ಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್ ಪರೀಕ್ಷೆ ಆಯೋಜಿಸಲಾಗಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಜಶೇಖರ ಕಬಾಡಗಿ, ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 45 ರಿಂದ 50 ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯದ ಪ್ರವೇಶ ಶುಲ್ಕದ ರಿಯಾಯಿತಿ ನೀಡಲಾಗುವುದು. ಒಟ್ಟು 5 ಲಕ್ಷ ರೂ.ಗಳ ಸ್ಕಾಲರ್​ಶಿಪ್ ಇದಾಗಿದೆ ಎಂದರು.

ಹತ್ತನೇ ತರಗತಿಯ ವಿಜ್ಞಾನ ಮತ್ತು ಗಣಿತ ವಿಷಯಗಳ (ತಲಾ 30 ಅಂಕ) ಒಟ್ಟು 60 ಅಂಕಗಳ ಪರೀಕ್ಷೆ ಇದಾಗಿದ್ದು, ಒಂದು ತಾಸಿನ ಅವಧಿಯ ಪರೀಕ್ಷೆ ನಡೆಸಲಾಗುವುದು. ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅಡ್ವಾನ್ಸ್ ಸ್ಪೋಕನ್ ಇಂಗ್ಲಿಷ, ಕಂಪ್ಯೂಟರ್ ಶಿಕ್ಷಣ, ಸಿಎ, ಸಿಎಸ್, ಸಿಎಂಎ ಇಂಟಿಗ್ರೇಟೆಡ್ ಕೋಚಿಂಗ್ ಸೌಲಭ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಕೆ-ಸಿಇಟಿ ಕೋಚಿಂಗ್ ಸೌಲಭ್ಯವೂ ಇದೆ ಎಂದು ತಿಳಿಸಿದರು.

ಪ್ರಾಚಾರ್ಯ ಪ್ರಸಾದ ದೇಸಾಯಿ ಹಾಗೂ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಸನ್ನ ಜೋಶಿ ಸುದ್ದಿಗೋಷ್ಠಿಯಲ್ಲಿ ಇದ್ದರು.