ಕಿನ್ನಿಗೋಳಿಯಲ್ಲಿ ಲೋಕಮುಖಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನ, ಪುಸ್ತಕ, ಬ್ಯಾಗ್, ಕೊಡೆಗಳನ್ನು ವಿತರಿಸಲಾಯಿತು. ಪ್ರಮುಖರಾದ ಯಶವಂತ ಮೂಲ್ಕಿ, ಕೆ.ಸೀತಾರಾಮ ಶೆಟ್ಟಿ, ಧನಂಜಯ ಶೆಟ್ಟಿಗಾರ್, ವಿಶ್ವನಾಥ ಬಪ್ಪನಾಡು, ಡಾ.ಸೋಂದಾ ಭಾಸ್ಕರ ಭಟ್, ಮಾಧವ ಕೆರೆಕಾಡು ಮತ್ತಿತರರು ಉಪಸ್ಥಿತರಿದ್ದರು. 
ಜಿಲ್ಲೆ

ಕಿನ್ನಿಗೋಳಿಯಲ್ಲಿ ವಿದ್ಯಾರ್ಥಿವೇತನ ವಿತರಣೆ

ಕಿನ್ನಿಗೋಳಿ: ಶಿಕ್ಷಣ, ಸಂಸ್ಕಾರ, ಸ್ವಾವಲಂಬನೆ, ಪರಿಸರ ಹಾಗೂ ಗ್ರಾಮಾಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಲೋಕಮುಖಿ ಟ್ರಸ್ಟ್‌ನ ಕಾರ್ಯಗಳು ಅಭಿನಂದನೀಯ ಎಂದು ನಿವೃತ್ತ ಪ್ರಾಚಾರ್ಯ ಯಶವಂತ ಮೂಲ್ಕಿ ಹೇಳಿದರು.

ಕಿನ್ನಿಗೋಳಿಯಲ್ಲಿ ಲೋಕಮುಖಿ ಟ್ರಸ್ಟ್ ವತಿಯಿಂದ ಐವತ್ತಕ್ಕೂ ಹೆಚ್ಚು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪುಸ್ತಕ, ಬ್ಯಾಗ್, ಕೊಡೆಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಟೀಲು ದಿ.ನಾರಾಯಣ ಅಮೀನ್ ಸ್ಮರಣಾರ್ಥ ಅವರ ಮಕ್ಕಳು ಏಳು ಮಂದಿಗೆ ವಿದ್ಯಾರ್ಥಿವೇತನ ನೀಡಿದರು. ಕೆ.ಸೀತಾರಾಮ ಶೆಟ್ಟಿ, ಧನಂಜಯ ಶೆಟ್ಟಿಗಾರ್, ಟ್ರಸ್ಟ್‌ನ ವಿಶ್ವನಾಥ ಬಪ್ಪನಾಡು, ಟ್ರಸ್ಟ್ ಅಧ್ಯಕ್ಷ ಡಾ.ಸೋಂದಾ ಭಾಸ್ಕರ ಭಟ್, ಕಾರ್ಯದರ್ಶಿ ಮಾಧವ ಕೆರೆಕಾಡು, ಹರ್ಷ ಕೆರೆಕಾಡು, ರಾಜೇಶ್ ದಾಸ್, ಪಾರ್ಥಸಾರಥಿ, ಸಂಪತ್ ಕಾರ್ನಾಡ್, ಉಮೇಶ್ ಪಂಜ, ನೂತನ್, ಪ್ರೀತಮ್ ಮತ್ತಿತರರಿದ್ದರು.