ಜಿಲ್ಲೆ

ಗುರುಮಠದಲ್ಲಿ ವಿದ್ಯಾರ್ಥಿವೇತನ ವಿತರಣೆ

ಸೌಮ್ಯ ಆರ್

ಮೂಡುಬಿದಿರೆ: ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಶ್ರಾವಣ ಮಾಸದ ವಿಶೇಷ ಪುಷ್ಪ ಪೂಜೆ ಅಂಗವಾಗಿ ಶ್ರೀ ಕಾಳಿಕಾಂಬಾ ಸೇವಾ ಸಮಿತಿ ವತಿಯಿಂದ ತಾಳಮದ್ದಳೆ, ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ನಡೆಯಿತು.

ಯಕ್ಷಗಾನ ಕಲಾವಿದ ಡಾ.ಮಹೇಶ್ ಕುಮಾರ್ ಸಾಣೂರು ಮಾತನಾಡಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಕೆ.ಬಾಲಕೃಷ್ಣ ಆಚಾರ್ಯ ಉದ್ಘಾಟಿಸಿದರು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಮೊಕ್ತೇಸರರಾದ ಉಳಿಯ ಶಿವರಾಮ ಆಚಾರ್ಯ, ಯೋಗೀಶ ಆಚಾರ್ಯ, ಸೇವಾ ಸಮಿತಿ ಅಧ್ಯಕ್ಷ ಶ್ರೀನಾಥ ಆಚಾರ್ಯ, ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಲಾ ಎಸ್.ಆಚಾರ್ಯ ಶುಭ ಹಾರೈಸಿದರು.

ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಶ್ರೀನಾಥ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಸುಧಾಕರ ಆಚಾರ್ಯ ಹೊಸಬೆಟ್ಟು ವಂದಿಸಿದರು. ಜಗದೀಶ ಆಚಾರ್ಯ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು. ‘ಸತ್ವ ಪರೀಕ್ಷೆ’ ಯಕ್ಷಗಾನ ತಾಳಮದ್ದಳೆಯಲ್ಲಿ ಜನ್ಸಾಲೆ, ಶಶಾಂಕ್, ಪ್ರಜ್ವಲ್ ಮುಂಡಾಡಿ, ಸುಣ್ಣಂಬಳ, ವಾಸುದೇವ ರಂಗಾಭಟ್, ಡಾ.ವಾದಿರಾಜ ಕಲ್ಲೂರಾಯ, ಡಾ.ಮಹೇಶ್ ಸಾಣೂರು, ದಿನೇಶ್ ಶರ್ಮ ಕೊಯ್ಯೂರು ಭಾಗವಹಿಸಿದ್ದರು.