ಚೆನ್ನದಾಸರ ಸಮಾಜ ಸೇವಾ ಸಂಘದ ತಾಲೂಕು ಘಟಕ ಸಿಂಧನೂರಿನ ತಹಸಿಲ್ ಕಚೇರಿ ಉಪತಹಸೀಲ್ದಾರ್ ಚಂದ್ರಶೇಖರಗೆ ಮನವಿ ಸಲ್ಲಿಸಿತು. ಛಲವಾದಿ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ರಾಮಣ್ಣ ಗೋನವಾರ, ಚೆನ್ನದಾಸರ ಸಮಾಜ ಸೇವಾ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಗೊರೇಬಾಳ, ಗೌರವಾಧ್ಯಕ್ಷ ಗದ್ದೆಪ ್ಪ ಈಚನಾಳ, ಪ್ರಧಾನ ಕಾರ್ಯದರ್ಶಿ ನರಸಿಂಹ ಭೇರಿಗಿ, ಖಜಾಂಚಿ ಹನುಮಂತ ಎಲೆಕೂಡ್ಲಿಗಿ ಇದ್ದರು. 
ಜಿಲ್ಲೆ

ಪರಿಶಿಷ್ಟ ಜಾತಿ ಪ್ರವರ್ಗ-ಬಿಗೆ ಸೇರುವುದು ಹಕ್ಕು

Kopala - Desk - Eraveni

ಸಿಂಧನೂರು: ಮಾಲದಾಸರ, ಚೆನ್ನದಾಸರ ಮತ್ತು ಹೊಲೆ ದಾಸರ ಉಪಜಾತಿಗಳನ್ನು ಪ್ರವರ್ಗ ಬಿ ಕೆಟಗರಿ (ಬಲಗೈ)ಯಲ್ಲಿ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಚೆನ್ನದಾಸರ ಸಮಾಜ ಸೇವಾ ಸಂಘದ ತಾಲೂಕು ಘಟಕ ಸೋಮವಾರ ಪ ್ರತಿಭಟನಾ ಮೆರವಣಿಗೆ ನಡೆಸಿ ತಹಸಿಲ್ ಕಚೇರಿ ಉಪತಹಸೀಲ್ದಾರ್ ಚಂದ್ರಶೇಖರಗೆ ಮನವಿ ಸಲ್ಲಿಸಿತು.

ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದ ಮಾರ್ಗವಾಗಿ ಮಿನಿವಿಧಾನಸೌಧ ಕಚೇರಿವರೆಗೆ ನಡೆಸಲಾಯಿತು. ಚೆನ್ನದಾಸರ, ಮಾಲದಾಸರ ಹಾಗೂ ಹೊಲೆಯ ದಾಸರು ಮೂಲ ಅಸ್ಪಶ್ಯ ಜಾತಿಗೆ ಸೇರಿದವರಾಗಿದ್ದು, ನಾವು ಅಲೆಮಾರಿಗಳು ಅಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದಿದೆ ್ದೀವೆ.

ನಾವೆಲ್ಲರೂ ಮಾದಿಗ ಮತ್ತು ಛಲವಾದಿ ಕುಟುಂಬಗಳ ಕೇರಿಗಳಲ್ಲಿ ಸಹೋದರರಂತೆ ಬದುಕುತ್ತಿದ್ದೇವೆ. ನ್ಯಾ.ಸದಾಶಿವ ಆಯೋಗದ ವರದಿ ಪ ್ರಕಾರ ವಾಸ್ತವದಲ್ಲಿ ಛಲವಾದಿ ಸಂಬಂಧಿತ ಜಾತಿಯವರಾಗಿದ್ದೇವೆ. ಸ್ಪಶ್ಯ ಗುಂಪಿಗೆ ಸೇರಿಸಿ ಸಮುದಾಯಕ್ಕೆ ದ್ರೋಹ ಆಧಾರದ ಮೇಲೆ ಸಹ ಚೆನ್ನದಾಸರ,

ಮಾಲದಾಸರ ಮತ್ತು ಹೊಲೆಯದಾಸರ ಸಮುದಾಯಗಳು ಹೊಲೆಯ ಅಥವಾ ಛಲವಾದಿ ಸಂಬಂಧಿತ ಗುಂಪಿಗೆ ಸೇರಿದ್ದಾಗಿರುತ್ತವೆ ಎಂದು ಉಲ್ಲೇಖಿಸಲಾಗಿದೆ. ಆದ್ದರಿಂದ ನಾವು ಪರಿಶಿಷ್ಟ ಜಾತಿ ಪ್ರವರ್ಗ-ಬಿ (ಬಲಗೈ) ಗುಂಪಿಗೆ ಸೇರುವುದು ನಮ್ಮ ಹಕ್ಕು ಮತ್ತು ಅಧಿಕಾರವಾಗಿದೆಂದು ಒತ್ತಾಯಿಸಿತು. ಛಲವಾದಿ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ರಾಮಣ್ಣ ಗೋನವಾರ, ಚೆನ್ನದಾಸರ ಸಮಾಜ ಸೇವಾ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಗೊರೇಬಾಳ, ಗೌರವಾಧ್ಯಕ್ಷ ಗದ್ದೆಪ ್ಪ ಈಚನಾಳ, ಪ್ರಧಾನ ಕಾರ್ಯದರ್ಶಿ ನರ ಸಿಂಹ ಭೇರಿಗಿ,

ಖಜಾಂಚಿ ಹನುಮಂತ ಎಲೆಕೂಡ್ಲಿಗಿ, ಅರುಣಕುಮಾರ ಬೇರ‌್ಗಿ, ನಾಗರಾಜ ಕೆ.ಹೊಸಳ್ಳಿ, ಸತ್ಯನಾರಾಯಣ ತುರ್ವಿಹಾಳ, ವಿಜಯ ಕುಮಾರ, ಯಂಕೋಬ ರಾಮತ್ನಾಳ, ಗೋವಿಂದಪ ್ಪ ಸುಲ್ತಾನಪುರ, ಕೃಷ್ಣಮೂರ್ತಿ ಧುಮತಿ, ಹನುಮಂತಪ ್ಪ, ಮುನಿಸ್ವಾಮಿ, ಆಂಜನೇಯ ಧುಮತಿ, ಶ್ರೀನಿವಾಸ ಗೋನವಾರ, ಕನಕರಾಯ ಜವಳಗೇರಾ, ವೆಂಕಣ್ಣ ಚಿಕ್ಕ ೇರಿಗಿ, ಗಿರಿಯಪ್ಪ ಈಚನಾಳ ವಕೀಲ ಇದ್ದರು.