ಜಿಲ್ಲೆ

ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ 29, 30ರಂದು

ರಮೇಶ ಮೇಳಕುಂದಾ

ಕಲಬುರಗಿ: ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನಿಂದ ಡಿ.೨೯ ಮತ್ತು ೩೦ರಂದು ಎರಡು ದಿನ ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ರಾಜ್ಯ ಮಟ್ಟದ ೩ನೇ ವೈಜ್ಞಾನಿಕ ಸಮ್ಮೇಳನ ನಡೆಯಲಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ರವೀಂದ್ರ ಶಾಬಾದಿ ತಿಳಿಸಿದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸಚಿವರು, ಶಾಸಕರು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಶಿವರಾಜ ಪಾಟೀಲ್ ಅವರನ್ನು ಪ್ರಸಕ್ತ ವರ್ಷದ ರಾಜ್ಯಮಟ್ಟದ ಎಚ್.ನರಸಿಂಹಯ್ಯ ಪ್ರಶಸ್ತಿ, ಜಿಲ್ಲಾ ಮಟ್ಟದ ಪ್ರಶಸ್ತಿ ಚಿಂತಕ ಪ್ರೊ.ಆರ್.ಕೆ.ಹುಡಗಿ ಅವರನ್ನು ಆಯ್ಕೆ ಮಾಡಲಾಗಿದೆ. ಮಹಾ ಅಧೀವೇಶನ, ವೈಚಾರಿಕ ವಿಷಯ ಕುರಿತು ವಿವಿಧ ಗೋಷ್ಠಿ, ವಿಜಾನಿ-ವಿದ್ಯಾರ್ಥಿ ಸಂವಾದ, ಸಾಂಸ್ಕೃತಿಕ ವೈಭವ, ಹಾಡು ಹಾಸ್ಯ, ಆಹಾರ ಮೇಳ, ಖಾದಿ, ಪುಸ್ತಕ, ವಿಜಾನ ವಸ್ತು ಪ್ರದರ್ಶನ ಸೇರಿ ವೈವಿಧ್ಯಮ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.

ಆಸಕ್ತರು ಆನ್‌ಲೈನ್ https://zfrmz.in/sTlmxaS3biW3D8PivLIV ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಪ್ರತಿಯೊಬ್ಬರಿಗೂ ೩೦೦ ರೂ. ಫೀಸ್ ಇದ್ದು, ವಸತಿ, ಊಟ ಉಚಿತವಾಗಿ ನೀಡಿ, ಕಿಟ್ ವಿತರಿಸಲಾಗುವುದು ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಡಾ. ಶಿವರಂಜನ ಸತ್ಯಂಪೇಟೆ, ಶರಣಬಸವ ಕಲ್ಲಾ, ಸತೀಶ ಸಜನ್, ನೀಲಕಂಠ ಅವಂಟಿ, ಪರಮೇಶ್ವರ ಶೆಟಕಾರ್ ಇತರರಿದ್ದರು.

ವೈಜ್ಞಾನಿಕ ಚಿಂತನೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ವೈಜ್ಞಾನಿಕ ಸಂಶೋಧನಾ ಪರಿಷತ್ ಸಮ್ಮೇಳನ ಸೇರಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಸಮ್ಮೇಳನದಲ್ಲಿ ನಾಡಿನ ಖ್ಯಾತ ಚಿಂತಕರು, ವೈಜ್ಞಾನಿಕ ಲೇಖಕರು, ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ.| ಶಿವರಂಜನ್ ಸತ್ಯಂಪೇಟ್ಜಿಲ್ಲಾ ಪ್ರಧಾನ ಕಾರ್ಯದರ್ಶಿವೈಜ್ಞಾನಿಕ ಸಂಶೋಧನಾ ಪರಿಷತ್