ಸೋಮವಾರಪೇಟೆ: ತಾಲೂಕಿನಾದ್ಯಂತ ಮಳೆಯ ಅರ್ಭಟ ಕಡಿಮೆಯಾಗಿದ್ದು, ಗಾಳಿ ಮುಂದುವರಿದಿದೆ. ಅಲ್ಲಲ್ಲಿ ಮರಗಳು ಧೆರೆಗುರುಳುತ್ತಿವೆ.
ಕಲ್ಕಂದೂರು ಗ್ರಾಮದಲ್ಲಿ ಕೆರೆಯ ಏರಿ ಒಡೆದಿದ್ದು ಹಾನಿ ಸಂಭವಿಸಿದೆ. ಕೆರೆಯ ಕೆಳಭಾಗದಲ್ಲಿರುವ ಅಪ್ಪಯ್ಯ ಎಂಬುವರ ಭತ್ತ ಗದ್ದೆಯ ಮೇಲೆ ನೀರು ಹರಿದು ಮರಳು ಮಿಶ್ರಿತ ಹೂಳು ಸಂಗ್ರಹವಾಗಿದೆ. ಸೋಮವಾರಪೇಟೆ ಕೂತಿ ರಸ್ತೆಯ ಹೊಸಬೀಡು ಸಮೀಪದ ಮುಖ್ಯರಸ್ತೆಯಲ್ಲಿ ನೀರು ಸಂಗ್ರಹವಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಹೊಸಬೀಡು ಗ್ರಾಮದ ಪೃಥ್ವಿ, ಅವಿನಾ, ರವಿ, ಲಿಂಗರಾಜು ಅವರ ಗದ್ದೆಗೆ ಹಾನಿಯಾಗಿದೆ.
ಯಡೂರು ಜೇಡಿಗುಂಡಿ ಸಮೀಪದ ಬರೆ ಕುಸಿದ ಮಣ್ಣನ್ನು ಟಿಪ್ಪರ್‌ಗಳ ಮೂಲಕ ಸಾಗಿಸಲಾಗುತ್ತಿದ್ದು, ಸೋಮವಾರಪೇಟೆ, ಶಾಂತಳ್ಳಿ, ಸಕಲೇಶಪುರ ಮಾರ್ಗದ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಗಿಲ್ಲ.