ಜಿಲ್ಲೆ

ಚಕ್ಕಡಿಯಿಂದ ಕೆಳಗೆ ಬಿದ್ದು ವ್ಯಕ್ತಿ ಸಾವು

Haveri - Kariyappa Aralikatti

ಶಿಗ್ಗಾಂವಿ: ಚಕ್ಕಡಿ ಮೇಲಿಂದ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಬಂಕಾಪುರ ರಸ್ತೆಯಲ್ಲಿ ನಡೆದಿದೆ.

ಪಟ್ಟಣದ ಗಾಂಧಿ ನಗರದ ಚನ್ನಪ್ಪ ರಾಮಣ್ಣ ಸುಣಗಾರ (55) ಮೃತನು.

ಇವರು ಗೋವಿನಜೋಳದ ತೆನೆ ಮುರಿಯಲು ಜಮೀನಿಗೆ ಹೊರಟಿದ್ದ ಸಮಯದಲ್ಲಿ ಚಕ್ಕಡಿಯಿಂದ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಶಿಗ್ಗಾಂವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.