ಜಿಲ್ಲೆ

ಎಸ್ಸಿ, ಎಸ್ಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಬೇಡಿ : ಬಾಲರಾಜ ಅರಬರ

Gadag - Shivanand Hiremath

ಗದಗ:
ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಿಟ್ಟದ್ದ 11 ಸಾವಿರ ಕೋಟಿ ರೂ. ಕರ್ನಾಟಕ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಬಳಿಸಿರುವುದನ್ನು ಕರ್ನಾಟಕ ದಲಿತ ಸಂರ್ಷ ಸಮಿತಿ ವಿರೋಧಿಸುತ್ತದೆ. ಸಮುದಾಯದ ಅನುದಾನವನ್ನು ಸಮುದಾಯಕ್ಕೆ ಬಳಸಬೇಕು ಎಂದು ಆಗ್ರಹಿಸಿ ಜಿಲ್ಲಾ ಸಮಿತಿಯ ಪ್ರಧಾನ ಸಂಚಾಲಕ ಬಾಲರಾಜ ಅರಬರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿತು.
ಮನವಿ ಸಲ್ಲಿಸಿ ಮಾತನಾಡಿದ ಬಾಲರಾಜ ಅರಬರ, ಪ್ರಸಕ್ತ ಸಾಲಿನ ಕಾಂಗ್ರೆಸ್​ ಸರ್ಕಾರ ಪಜಾ., ಪಪಂ. ಮೀಸಲಿಟ್ಟ ಸುಮಾರು 11 ಸಾವಿರ ಕೋಟಿ ಅನುದಾನವನ್ನು ಐದು ಗ್ಯಾರಂಟಿ ಯೋಜನೆಗೆ ಬಳಸುತ್ತಿದ್ದು ಖಂಡನೀಯ. ಸಾಮಾಜಿಕ ನ್ಯಾಯವನ್ನು ಎತ್ತಿದ ಪವೂ ದಲಿತ ಅಭಿವೃದ್ಧಿ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಈ 11 ಸಾವಿರ ಕೋಟಿ ರೂಪಾಯಿ ತಣಕ್ಕೆ ಈ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿರುವುದನ್ನು ನಿಲ್ಲಿಸಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ನಾಗರಾಜ್​ ಗೋಕಾವಿ, ಮಾರುತಿ ಅಂಗಡಿ, ಕೆಂಚಪ್ಪ ಮ್ಯಾಗೇರಿ, ಬಸವರಾಜ ಚಲವಾದಿ, ಸಂತೋಷ್​ ಬಣಕಾರ್​, ಶಿವಾನಂದ್​ ಚಲವಾದಿ ಹಲವರು ಇದ್ದರು.