ಜಿಲ್ಲೆ

ಸಾವಳಗಿಯಲ್ಲಿ ಅಭಿನಂದನ ಜಾಥಾ

ಸಾವಳಗಿ: ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದು ಸ್ವಾಗತಾರ್ಹ ಎಂದು ರಾಜ್ಯ ವೀರ ಶಿವಾಜಿ ಸೇನೆ ಯುವ ಘಟಕದ ಉಪಾಧ್ಯಕ್ಷ ಉಮೇಶ ಜಾಧವ ಹೇಳಿದರು.

ಮರಾಠ ಸಮುದಾಯ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮಹಿಳೆಯರಿಂದ ಕುಂಭಮೇಳ ಹಾಗೂ ವಿವಿಧ ವಾದ್ಯಗಳ ಮೂಲಕ ಗ್ರಾಮದ ಕಲ್ಯಾಣ ಕಟ್ಟೆ ಮಾರ್ಗವಾಗಿ ಸರ್ಕಾರಕ್ಕೆ ಧನ್ಯವಾದ ಸಮರ್ಪಿಸುವ ಜಾಥಾ ಜರುಗಿತು.

ಜಿಲ್ಲಾ ಘಟಕದ ಅಧ್ಯಕ್ಷ ರಾಯಬಾ ಜಾಧವ ಮಾತನಾಡಿ, ಕರ್ನಾಟಕ ಮರಾಠ ಸಮಾಜ ಒಂದು ಸಮುದಾಯ. ಈ ನೆಲದಲ್ಲಿ ಕನ್ನಡ ಮರಾಠರಾಗಿ ವಂಶಪರಂಪರೆಯಾಗಿ ಬದುಕು ನಡೆಸುತ್ತಿದ್ದಾರೆ. ಅಚ್ಚ ಕನ್ನಡಿಗರಾಗಿ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಮರಾಠ ಸಮುದಾಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ತೀರಾ ಹಿಂದುಳಿದಿದೆ. ಸರ್ಕಾರ ಹಿಂದುಳಿದ ಮರಾಠ ಸಮಾಜವನ್ನು 3ಬಿ ಪ್ರವರ್ಗದಿಂದ 2ಎ ಪ್ರವರ್ಗಕ್ಕೆ ಸೇರಿಸಬೇಕೆಂದು ಹಲವಾರು ಬಾರಿ ಹೋರಾಟ ಮಾಡಲಾಗಿದೆ. ರಾಜ್ಯಾದ್ಯಂತ ಏಕ ಮರಾಠ ಲಾಕ್ ಮರಾಠ ಎಂಬ ಶೀರ್ಷಿಕೆಯಡಿ ಮೌನ ಮೆರವಣಿಗೆ ನಡೆಸಿದ್ದೇವೆ. ಇಷ್ಟೆಲ್ಲ ಹೋರಾಟಗಳಿಗೆ ಸರ್ಕಾರ ಸ್ಪಂದಿಸಿ ನಿಗಮ ಸ್ಥಾಪಿಸಿದೆ ಎಂದು ಹೇಳಿದರು.

ನಾವು ಕೂಡ ಕನ್ನಡಿಗರು ಎಂದು ಎದೆ ತಟ್ಟಿ ಹೇಳುತ್ತೇವೆ. ಮರಾಠ ಸಮುದಾಯ ಪ್ರಾಧಿಕಾರ ಹಾಗೂ ಮರಾಠ ಭಾಷೆಗೆ ಬಹಳ ವ್ಯತ್ಯಾಸವಿದೆ. ಕೆಲವು ಸಂಘ-ಸಂಸ್ಥೆಗಳು ಪೂರ್ವಾಪರ ವಿಚಾರ ಹಾಗೂ ಚರ್ಚೆ ಮಾಡದೆ ಮರಾಠ ಒಂದು ಜನಾಂಗ ಎಂಬುದನ್ನು ಮರೆತು ಕೇವಲ ಮರಾಠಿ ಭಾಷೆಯನ್ನು ಮುಂದಿಟ್ಟುಕೊಂಡು ವಿರೋಧ ವ್ಯಕ್ತಪಡಿಸುತ್ತಿರುವದು ಸರಿಯಲ್ಲ ಎಂದು ಹೇಳಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಮಾರುತಿ ನಿಕ್ಕಂ, ಚಂದ್ರಶೇಖರ ಕನಕಿಕರ, ಜಿಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಪಾರ್ಶ್ವನಾಥ ಉಪಾಧ್ಯ, ವಸಂತ ನಿಕ್ಕಂ, ಶೇಖರ ಮಾನೋಜಿ, ಭೀಮಸಿ ಕದಂ, ಸಂಜೀವ ಮೋಹಿತೆ ಸೇರಿ ಇತರರು ಇದ್ದರು.

StartFragment

EndFragment