ಸಾವಳಗಿ: ಸಮೀಪದ ಹಿರೇಪಡಸಲಗಿ ಗ್ರಾಮದ ಸರಹದ್ದಿನಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಸಾವಳಗಿ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಅಡಿಹುಡಿ ಗ್ರಾಮದ ಅಮಸಿದ್ದ ಗುರಪ್ಪ ಜೈನಾಪುರನನ್ನು ಬಂಧಿಸಿ ಐದು ಸಾವಿರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಮತ್ತೊಂದು ಪ್ರತ್ಯೇಕ ದಾಳಿ ವೇಳೆ ನಾಗನೂರ ಗ್ರಾಮದ ಸಾಗರ ಶ್ರವಣ ಹರಿಜನ (ಜಂಬಗಿ) ಎಂಬ ವ್ಯಕ್ತಿಯನ್ನು ಬಂಧಿಸಿ ಆತನಿಂದ 5500 ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆ ವೇಳೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಅಭಯಕುಮಾರ ಮೊರಬ, ಸಾವಳಗಿ ಠಾಣೆ ಪಿಎಸ್‌ಐ ಶೇಖರ ಎಸ್.ಘಾಟಗೆ, ಸಿಬ್ಬಂದಿ ಇದ್ದರು.
EndFragment