ಜಿಲ್ಲೆ

ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮದಿನವನ್ನು ಇತ್ತೀಚೆಗೆ ಆಚರಿಸಲಾಯಿತು.

ಅತಿಥಿಯಾಗಿ ಆಗಮಿಸಿದ್ದ ಶಿವಲಿಂಗ ನೀಲಗುಂದ ಮಾತನಾಡಿ, ಶಿಕ್ಷಕರು ದೇವರಿದ್ದಂತೆ ಅವರಿಗೆ ಗೌರವ ನೀಡುವುದನ್ನು ವಿದ್ಯಾರ್ಥಿಗಳು ಕಲಿಯಬೇಕು. ತರಗತಿಗಳಲ್ಲಿನ ಪಾಠವನ್ನು ಗಮನವಿಟ್ಟು ಕೇಳಿದರೆ ಅರ್ಧ ವಿದ್ಯೆ ಕಲಿತಂತೆ. ಶಿಕ್ಷಕರ ಶ್ರಮಕ್ಕೆ ತಕ್ಕಂತೆ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.

ಎಸ್​.ಎಂ. ಹೂಗಾರ ಮಾತನಾಡಿ, ಸಾವಿತ್ರಿಬಾಯಿ ಅವರ ಜೀವನದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರಲ್ಲದೆ, ಮಹಿಳೆಯರ ಶಿಕ್ಷಣಕ್ಕಾಗಿ ಅವರು ನಡೆಸಿದ ಹೋರಾಟವನ್ನು ಸ್ಮರಿಸಿದರು.

ಶಾಲೆ ಮುಖ್ಯ ಗುರು ದೇವೇಂದ್ರ ಹೊಂಬಳ ಅಧ್ಯಕ್ಷತೆ ವಹಿಸಿದ್ದರು. ಅವ್ವಪ್ಪಣ್ಣ ಅತ್ತಿಗೇರಿ ಕೈಗಾರಿಕಾ ಸಂಸ್ಥೆ ಪ್ರಾಚಾರ್ಯ ಎಸ್​.ಎಂ. ಬಮ್ಮನಗೌಡರ, ಲತಾ ಪಾಗೋಜಿ, ನಂದಿನಿ ಗಡಾದ, ಚೈತ್ರಾ ಸಂಗೊಳ್ಳಿ, ಇತರರು ಇದ್ದರು.

ಅರ್ಚನಾ ಹಿರೇಮಠ ನಿರೂಪಿಸಿದರು. ಗೌರವ್ವ ಅಮರಗೋಳ ವಂದಿಸಿದರು.