ಹುಬ್ಬಳ್ಳಿ: ಭಾರತವು ಅಭಿವೃದ್ಧಿಯ ನಾಗಾಲೋಟದಲ್ಲಿ ಮುನ್ನಡೆಯುತ್ತಿದ್ದು, ಇದು ಇನ್ನಷ್ಟು ವೇಗ ಪಡೆಯಬೇಕು. ಈ ಮಹತ್ಕಾರ್ಯಕ್ಕೆ ಮತ್ತೆ ಮೋದಿ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಬೇಕಿದ್ದು, ಈ ಚುನಾವಣೆಯಲ್ಲಿ ಎಲ್ಲ ಸಮಾಜದವರು ಬಿಜೆಪಿ ಗೆಲ್ಲಿಸಲು ಶ್ರಮಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನವಿ ಮಾಡಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸವಿತಾ ಸಮಾಜದವರ ಸಭೆಯಲ್ಲಿ ಅವರು ಮಾತನಾಡಿದರು.
ಮುಂಬರುವ ದಿನಗಳಲ್ಲಿ ಭಾರತವು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ವಿಶ್ವದ ಹಿರಿಯಣ್ಣನಾಗಿ ಮುನ್ನಡೆಯಲಿದೆ. ಜಗತ್ತಿನ ನಂಬರ್ ಒನ್ ದೇಶವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ಮೋದಿ ಅವರ ನೇತೃತ್ವದಲ್ಲಿ ಕಳೆದೊಂದು ದಶಕದಲ್ಲಿ ಭಾರತ ಅಭೂತಪೂರ್ವ ಅಭಿವೃದ್ಧಿ ಸಾಧಿಸಿದೆ. ಅವರ ಸಮರ್ಥ ನಾಯಕತ್ವ ಭಾರತದ ಅಭಿವೃದ್ಧಿಯ ಪಥವನ್ನೇ ಬದಲಿಸಿದೆ ಎಂದರು.
ಬಿಜೆಪಿ ಪ್ರಮುಖರಾದ ಸಂಜಯ ಕಪಟ್ಕರ್, ಕೃಷ್ಣ ಉಪ್ಪೇರ್, ರಘುನಾಥ ನಾರಾಯಣದಾಸ, ಮೋಹನ ಗೋಲಿ, ಬುಚ್ಚಣ್ಣ ಮುಷ್ಟಿಪಲ್ಲೆ, ಮಂಜು ಬಿಜವಾಡ, ಕೃಷ್ಣ ಗಂಡಗಾಳೇಕರ, ಮಾಸಣ್ಣ ಅಮರಜಿಂತಾ ಹಾಗೂ ಸವಿತಾ ಸಮಾಜದ ಪ್ರಮುಖರು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.