ಜಿಲ್ಲೆ

ಮಾ.1ಕ್ಕೆ ಸವಿಗಾನ ಸಂಭ್ರಮ

Mandara

ಬೆಂಗಳೂರು: ವಿಜಯನಗರ ಸಾಂಸ್ಕೃತಿಕ ಕಲಾಕೇಂದ್ರ ಹಾಗೂ ಸವಿಗಾನಲಹರಿ ಸುಗಮಸಂಗೀತ ಶಾಲೆ ಹಂಪಿನಗರ ಸಾರ್ವಜನಿಕ ಗ್ರಂಥಾಲಯ ಸಭಾಂಗಣದಲ್ಲಿ ಮಾ.1ರಂದು ಸವಿಗಾನ ಸಂಭ್ರಮ-2020 ಆಯೋಜಿಸಿವೆ.

ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಮಾಧ್ಯಮ ಸಹಯೋಗವಿರುವ ಕಾರ್ಯಕ್ರಮಕ್ಕೆ ವಸತಿ ಸಚಿವ ವಿ. ಸೋಮಣ್ಣ ಬೆಳಗ್ಗೆ 11ಕ್ಕೆ ಚಾಲನೆ ನೀಡುವರು. ಪಾಲಿಕೆ ಸದಸ್ಯ ಮೋಹನ್ ಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ, ಜಾನಪದ ಗಾಯಕ ಡಾ. ಮೇಮಗಲ್ ಡಿ. ನಾರಾಯಣಸ್ವಾಮಿ, ಕಿಮ್್ಸ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಟಿ.ಎಂ.ದೇವರಾಜ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಗಾಯಕ ಶಶಿಧರ್ ಕೋಟೆ ಹಾಗೂ ಚಲನಚಿತ್ರ ಹಿನ್ನಲೆ ಗಾಯಕಿ ಕೆ.ಎಸ್. ಸುರೇಖಾ ಅವರಿಗೆ ಬೆಳಗ್ಗೆ 11.30ಕ್ಕೆ ‘ಸವಿಗಾನ ರತ್ನ ವಾರ್ಷಿಕ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಸವಿಗಾನಲಹರಿ ಸುಗಮ ಸಂಗೀತ ಶಾಲೆಯ ಅಧ್ಯಕ್ಷ ಟಿ. ರಾಜಾರಾವ್ ತಿಳಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳು: ಬೆಳಗ್ಗೆ 10ಕ್ಕೆ ದಾಸಾಂಜಲಿ, ಭಾವಸಂಗಮ, ಜಾನಪದ ಸಿರಿಗಂಧ, ವಚನವೈಭವ, ಸಂತಶಿಶುನಾಳ ಶರೀಫರ ಗೀತಗಾಯನ ವಾದ್ಯ ವೈಭವ ಹಾಗೂ ನೃತ್ಯ ವೈಭವ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ನಾಡಿನ ದಾಸ ಸಂತ ಕವಿವರೇಣ್ಯರ ಗೀತಗಾಯನದಲ್ಲಿ ಶಶಿಧರ್ ಕೋಟೆ, ಕೆ.ಎಸ್. ಸುರೇಖಾ, ರಕ್ಷಾ ಪ್ರಿಯರಾವ್, ಜಯಂತಿ ಶ್ರೀನಿವಾಸ್, ವೆಂಕಟೇಶ್​ವುೂರ್ತಿ ಶಿರೂರು, ಮಂಜುನಾಥ್ ನಾಗಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.