ಬೀಳಗಿಯ ಬಸಲಿಂಗಮ್ಮ ಹೇಮನಗೌಡ ಜಕ್ಕನಗೌಡರ ಸರ್ಕಾರಿ ಬಾಲಕಿಯ ಪ್ರೌಡಶಾಲಾ ಆವರಣದಲ್ಲಿ ನಡೆದ ಇನ್ನರ್‌ವೀಲ್ ಕ್ಲಬ್ ಬೀಳಗಿ ಘಟಕದವತಿಯಿಂದ ಮಕ್ಕಳ ಕೌಶಲ್ಯ ಕಾರ್ಯ ಹಾಗೂ ಹ್ಯಾಪಿ ಸ್ಕೂಲ್ ಕಾರ್ಯಕ್ರಮದಲ್ಲಿ ಸಂಕ್ರಾಂತಿಯ ಗ್ರಾಮೀಣ ಸೊಗಡು ಅನಾವರಣಗೊಳಿಸಿದರು. ಜೇಮ್ಸ್ ಶುಗರ್ಸ್‌ ನಿರ್ದೇಶಕ ರಾಮನಗೌಡ ಜಕ್ಕನಗೌಡ, ಬಿಇಒ ಆರ್. ಎಸ್. ಆದಾಪೂರ, ಬಿಆರ್‌ಸಿ ಶಿವಾಜಿ ಕಾಂಬಳೆ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಶಿಲ್ಪಾ ಪಾಟೀಲ ಇದ್ದರು. 
ಜಿಲ್ಲೆ

ಮುಂದಿನ ಪೀಳಿಗೆಗೂ ಸಂಪ್ರದಾಯ, ಪರಂಪರೆ ಉಳಿಸಿ

Vijayapura - Desk - Gurappa Lokuri

ಬೀಳಗಿ: ಹಿಂದಿನ ಕಾಲದಿಂದಲೂ ಹಿರಿಯರು ಅನುಸರಿಸಿ ಹಾಕಿಕೊಂಡು ಬಂದಿರುವ ಸಂಪ್ರದಾಯ, ಕಲೆ, ಸಾಹಿತ್ಯ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸುವ ಕೆಲಸವಾಗಬೇಕಿದೆ ಎಂದು ಜೆಮ್ ಶುಗರ್ಸ್‌ ನಿರ್ದೇಶಕ ರಾಮನಗೌಡ ಜಕ್ಕನಗೌಡರ ಹೇಳಿದರು.

ಸ್ಥಳೀಯ ಬಸಲಿಂಗಮ್ಮ ಹೇಮನಗೌಡ ಜಕ್ಕನಗೌಡರ ಸರ್ಕಾರಿ ಬಾಲಕಿಯ ಪ್ರೌಡಶಾಲಾ ಆವರಣದಲ್ಲಿ ಇನ್ನರ್‌ವೀಲ್ ಕ್ಲಬ್ ಬೀಳಗಿ ಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ ಗ್ರಾಮೀಣ ಸೊಗಡು ಅನಾವರಣ, ಮಕ್ಕಳ ಕೌಶಲ ಕಾರ್ಯ ಹಾಗೂ ಹ್ಯಾಪಿ ಸ್ಕೂಲ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಂತ್ರಜ್ಞಾನ ಬೆಳೆಯುತ್ತಿದಂತೆ ಹೊಸ ಹೊಸ ಅವಿಷ್ಕಾರಗಳು ಬರುವುದು ಸಹಜ. ಆದರೆ, ಮನುಷ್ಯರು ಯಾವ ರೀತಿ ಶ್ರಮವಹಿಸಿ ಆರೋಗ್ಯವಂತ ಸಮಾಜ ನಿರ್ಮಿಸಿದ್ದರು ಎನ್ನುವುದು ರೈತರು ಜಮೀನುಗಳಲ್ಲಿನ ಉಳುಮೆ ಪದ್ಧತಿ ಕಾಣುತ್ತಿತ್ತು. ಸದ್ಯ ಜಮೀನುಗಳಲ್ಲಿ ಯಂತ್ರಗಳ ಮೂಲಕ ಕೃಷಿ ಚಟುವಟಿಕೆ ನಡೆಯುತ್ತಿದೆ. ಮಕ್ಕಳು ಮತ್ತು ಇನ್ನರ್‌ವೀಲ್ ಕ್ಲಬ್‌ನವರು ಸಂಕ್ರಮಣ ಆಚರಣೆ ಜತೆಗೆ ಸಂಪ್ರದಾಯ ಯಾವ ರೀತಿಯಲ್ಲಿ ಇರುತ್ತದೆ ಎಂದು ತೋರಿಸಿದ್ದು ಗ್ರಾಮೀಣ ಸಂಸ್ಕೃತಿ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದು ಸಂತಸದ ವಿಷಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಎಸ್. ಆದಾಪೂರ ಕಾರ್ಯಕ್ರಮ ಉದ್ಘಾಟಿಸಿ ನಾತನಾಡಿ, ಮಕ್ಕಳಿಗೆ ಕಲಿಕೆ ಸಮಯದಲ್ಲಿ ಹಿರಿಯರ ಸಂಸ್ಕಾರ ಸಂಪ್ರದಾಯ ಕಲಿಕೆ ಹೇಳುವುದು. ಅವರು ಬೆಳೆದು ಅವರ ಕಾಲ ಮೇಲೆ ಅವರೇ ನಿಂತು ಸ್ವ ಉದ್ಯೋಗ ಮಾಡಿಕೊಳ್ಳಲು ಅನುಕೂಲವಾಗುವ ಯೋಜನೆಯನ್ನು ಈ ಕ್ಲಬ್‌ನವರು ಹಾಕಿಕೊಂಡಿದ್ದಾರೆ. ಮಕ್ಕಳು ಹಿರಿಯರನ್ನು ಮತ್ತು ಶಿಕ್ಷಕರನ್ನು ಗೌರವಿಸಿ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಉನ್ನತ ಹುದ್ದೆ ಅಲಂಕರಿಸಬೇಕು ಎಂದರು.

ಇನ್ನರ್‌ವೀಲ್ ಕ್ಲಬ್ ಬಾಗಲಕೋಟೆ ಜಿಲ್ಲಾ ಮುಖ್ಯಸ್ಥೆ ಜ್ಯೋತಿ ಕಿರಣದಾಸ ಮಾತನಾಡಿ, ಇನ್ನರ್‌ವೀಲ್ ಕ್ಲಬ್ ಸಾಮಾಜಿಕ ಕಾರ್ಯಗಳೊಂದಿಗೆ ಮಕ್ಕಳಿಗೆ ಉತ್ತಮ ಕಲಿಕಾ ವಾತಾರಣ ಸೃಷ್ಟಿಸುವ ಉದ್ದೇಶದಿಂದ ಪ್ರತಿ ವರ್ಷವೂ ಒಂದು ಸರ್ಕಾರಿ ಶಾಲೆಯಲ್ಲಿ ಹ್ಯಾಪಿ ಸ್ಕೂಲ್ ಎಂದು ಆಯ್ಕೆ ಮಾಡಿಕೊಂಡು ಅಂತಹ ಶಾಲೆಗೆ ಅಗತ್ಯವಿರುವ ಸಲಕರಣೆಗಳನ್ನು ನೀಡಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕೆಲಸವನ್ನು ಮಾಡುತ್ತಿದೆ ಎಂದು ತಿಳಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಶಿವಾಜಿ ಕಾಂಬಳೆ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಶಿಲ್ಪಾ ಪಾಟೀಲ, ಕಾರ್ಯದರ್ಶಿ ಡಾ. ಪಾರ್ವತಿ ಚೆಟ್ಟೇರ, ಶಾಲೆಯ ಮುಖ್ಯಶಿಕ್ಷಕ ಶಿವಾನಂದ ಗೋಕಾವಿ, ಶಿಕ್ಷಕರಾದ ವಿಜಯ ಮಲಘಾನ್, ಶಿವಾನಂದ ಬೋಳರಡ್ಡಿ, ಶ್ರೀದೇವಿ ಪ್ಯಾಟಿಮಠ, ಎ. ಆರ್. ಬೆಳ್ಳಿಕಟ್ಟಿ, ಸಿ. ಬಿ. ಹೂಗಾರ, ಮಂಜುಳಾ ಪಾಟೀಲ, ಇನ್ನರ್‌ವೀಲ್ ಕ್ಲಬ್‌ನ ನಿಕಟ ಪೂರ್ವ ಅಧ್ಯಕ್ಷೆ ಅನನ್ಯಾ ಪಾಟೀಲ, ಶಿವಗಂಗಾ ಪಾಟೀಲ, ಗೌರಿ ಬಿರಾದಾರ, ಸ್ನೇಹಾ ಪಾಟೀಲ, ಮೇಘಾ ಪತ್ರಿಮಠ, ಗೋದಾವರಿ ಮುರಜಾವಮಠ ಇತರರಿದ್ದರು.