ಜಿಲ್ಲೆ

ಗಳಿಸಿದ ಹಣ ಉಳಿಸಿ ಬೆಳೆಸಿ

ಸೋಮನಾಥ ರೆಡ್ಡಿ

ಗಜೇಂದ್ರಗಡ: ಸಹಕಾರಿಗಳ ನಡುವೆ ಪರಸ್ಪರ ನಂಬಿಕೆ ವಿಶ್ವಾಸವಿದ್ದಾಗ ಮಾತ್ರ ಯಾವುದೇ ಬ್ಯಾಂಕ್ ಅಥವಾ ಸಹಕಾರ ಸಂಘಗಳು ಯಶಸ್ವಿಯಾಗಲು ಸಾಧ್ಯ ಎಂದು ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಹೇಳಿದರು.

ಪಟ್ಟಣದ ವಿಘ್ನೇಶ್ವರ ವಿಧ್ಯಾವರ್ಧಕ ಸಂಘದಲ್ಲಿ ಭಾನುವಾರ ಪ್ರಿಯದರ್ಶಿನಿ ವಿವಿಧೋದ್ದೇಶಗಳ ಸಹಕಾರಿ ಸಂಘದ 2022-23 ನೇ ಸಾಲಿನ 24ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆರ್ಥಿಕ ಭದ್ರತೆ ಕುಟುಂಬದ ಶಕ್ತಿಯಾಗಿದೆ. ಹೀಗಾಗಿ ನಾವು ಗಳಿಸುವ ಆದಾಯದಲ್ಲಿ ಭವಿಷ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಳ್ಳುವ ಅಗತ್ಯವಿದೆ. ಹೀಗಾಗಿ ಖರ್ಚು ಮಾಡುವ ಹಣದಲ್ಲಿ ಉಳಿಸುವ ವಿಧಾನವನ್ನು ಅರಿತುಕೊಂಡರೆ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಿದೆ ಎಂದರು.

ಸಂಘದ ಉಪಾಧ್ಯಕ್ಷ ಅಪ್ಪು ಮತ್ತಿಕಟ್ಟಿ ಮಾತನಾಡಿ, ಠೇವಣಿದಾರರಿಗೆ ಹಾಗೂ ಗ್ರಾಹಕರ ನಂಬಿಕೆಯ ಪ್ರತಿಬಿಂಬವಾಗಿ ಕೆಲಸ ನಿರ್ವಹಿಸುತ್ತಿರುವ ಬ್ಯಾಂಕ್‌ನ ಠೇವಣಿದಾರರಿಗೆ ವಿಮಾ ಯೋಜನೆ, ಸಣ್ಣ ಉದ್ಯಮ, ಗೃಹ ಹಾಗೂ ವಾಹನ ಖರೀದಿಗೆ ಕೋ ಆಪರೇಟಿವ್ ನಿರ್ದೇಶನದಂತೆ ಸಾಲವನ್ನು ನೀಡಲಾಗುತ್ತಿದೆ ಎಂದರು.

ಸಂಘದ ಕಾರ್ಯದರ್ಶಿ ಅಮರಯ್ಯ ಗೌರಿಮಠ ಮಾತನಾಡಿ, ಬ್ಯಾಂಕ್ 8.9 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದರು.

ಸಂಘದ ವಿಶೇಷ ಸದಸ್ಯರನ್ನು ಸನ್ಮಾನಿಸಲಾಯಿತು, ಸಂಘದ ಸದಸ್ಯರ ಪ್ರತಿಭಾವಂತ 21 ಮಕ್ಕಳಿಗೆ 1 ಸಾವಿರ ರೂ. ಸಹಾಯಧನ ನೀಡಲಾಯಿತು. ಸಂಘದ ಅಧ್ಯಕ್ಷ ಶರಣಪ್ಪ ಕೊಟಗಿ, ಆಡಳಿತ ಮಂಡಳಿ ಸದಸ್ಯರಾದ ಮಹಾಂತೇಶ ಸೋಮನಕಟ್ಟಿ, ನಾಗೇಶ ಲಕ್ಕಲಕಟ್ಟಿ, ಕಳಕಪ್ಪ ಪಟ್ಟಣಶೆಟ್ಟಿ, ಫಕೀರಶೆಟ್ಟರ ಕುರಡಗಿ, ಲಕ್ಷ್ಮಣ ಮಾಲೋತ್ತರ, ನಿಂಗಬಸಪ್ಪ ಮಾಸ್ತಿ, ಗಂಗಾ ಜೋಳದ, ಗೀತಾ ವಾಲಿ, ಕಂಠೆಪ್ಪ ಸಂಗನಾಳ, ಅವಿನಾಶ ಕೊಟಗಿ, ದಾವಲಸಾಬ ತಾಳಿಕೋಟಿ, ಬಸವರಾಜ ಕರಬಾ ಶೆಟ್ಟರ, ಅಶೋಕ ಬುಗಡಿ, ಹನುಮಂತರಾವ್ ಕುಲಕರ್ಣಿ, ವಿಶ್ವನಾಥ ಕಂಚಗಾರ, ನಾಗರಾಜ ಕವಡಿಮಟ್ಟಿ, ಸಿದ್ದು ಹದ್ಲಿ, ಸುಮಂಗಲಾ ಯಂಕಂಚಿ ಇತರರು ಇದ್ದರು.