ಜವಳಗೇರಾ 54ನೇ ಉಪಕಾಲುವೆ ಬಳಿ ಕೆಳ ಭಾಗದ ರೈತರು ಧರಣಿ ನಡೆಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ, ಉಪಾಧ್ಯಕ್ಷರಾದ ರಾಮಯ್ಯ ಜವಳಗೇರಾ, ತಿಮಣ್ಣ ಭೋವಿ, ರೈತರಾದ ಶಂಕರೇಗೌಡ ಸುಲ್ತಾನಪುರ, ಅಮರೇಗೌಡ ಜವಳಗೇರಾ ಇತರರಿದ್ದರು. 
ಜಿಲ್ಲೆ

ಭತ್ತದ ಬೆಳೆ ಉಳಿಸಲು ಆದ್ಯತೆ ನೀಡಿ

Kopala - Desk - Eraveni

ಸಿಂಧನೂರು: ಕುಡಿವ ನೀರಿನ ಕೆರೆ ತುಂಬಿಸಲು ಮಾ.3ರಿಂದ ಉಪಕಾಲುವೆಗಳಿಗೆ ನೀರು ಬಂದ್ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಕೆಳ ಭಾಗದ ರೈತರು ಜವಳಗೇರಾ 54ನೇ ಉಪಕಾಲುವೆ ಬಳಿ ಸೋಮವಾರ ಧರಣಿ ನಡೆಸಿದರು.

ಎಡದಂಡೆ ನಾಲೆಯ 54ನೇ ಉಪಕಾಲುವೆ ಅಡಿಯಲ್ಲಿ ಬರುವ ಇತರ ನಾಲೆ ವ್ಯಾಪ್ತಿಯ ಕೆಳ ಭಾಗದಲ್ಲಿ ತಡವಾಗಿ ಭತ್ತ ನಾಟಿ ಮಾಡಲಾಗಿದೆ. ಈ ಸಮಯದಲ್ಲಿ ಉಪಕಾಲುವೆಗೆ ನೀರು ಬಂದ್ ಮಾಡಿ, ಮಾ.3ರಿಂದ 8ರವರೆಗೆ ಕುಡಿವ ನೀರಿನ ಕೆರೆ ತುಂಬಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ರೈತರ ಬೆಳೆ ಉಳಿಸುವುದರೊಂದಿಗೆ ಕೆರೆಗಳಿಗೆ ನೀರು ತುಂಬಿಸಬೇಕು.

ಜಲಾಶಯದಲ್ಲಿ ನೀರು ಇದ್ದು, ಅವೈಜ್ಞಾನಿಕ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಏಪ್ರಿಲ್ ಮೊದಲ ವಾರದಲ್ಲಿ ಕೆರೆ ತುಂಬಿಸಬಹುದು. ಐದಾರು ದಿನಗಳವರೆಗೆ ಕಾಲುವೆಗೆ ನೀರಿಲ್ಲದಿದ್ದರೆ, ಕೆಳ ಭಾಗದ 30 ಸಾವಿರಕ್ಕೂ ಅಧಿಕ ಎಕರೆ ಭೂಮಿಯಲ್ಲಿ ಬೆಳೆದ ಭತ್ತದ ಬೆಳೆ ನಾಶವಾಗಲಿದೆ. ಕಾಲುವೆಗೆ ಯಾವುದೇ ಕಾರಣಕ್ಕೆ ನೀರು ಬಂದ್ ಮಾಡಬಾರದು ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ, ಉಪಾಧ್ಯಕ್ಷರಾದ ರಾಮಯ್ಯ ಜವಳಗೇರಾ, ತಿಮಣ್ಣ ಭೋವಿ, ರೈತರಾದ ಶಂಕರೇಗೌಡ ಸುಲ್ತಾನಪುರ, ಅಮರೇಗೌಡ ಜವಳಗೇರಾ, ಟಿ.ರಾಮಕೃಷ್ಣ ಬಾಲಯ್ಯಕ್ಯಾಂಪ್, ಸೋಮಶಂಕರಪ್ಪ, ಲಿಂಗಪ್ಪ ಯರದಿಹಾಳ, ಆರ್.ರಮೇಶ ಸಿಎಸ್‌ಎಫ್‌ಕ್ಯಾಂಪ್, ಕಲ್ಲಪ್ಪ ತುರಕಟ್ಟಿಕ್ಯಾಂಪ್, ಗೋವಿಂದರಾಜ ಜವಳಗೇರಾ, ಮಾನಯ್ಯ, ನಾಗಪ್ಪ, ಆಂಜನೇಯ, ಅಯ್ಯಣ್ಣ, ವೆಂಕೋಬ, ಮಲ್ಲಪ್ಪ, ದುರುಗಪ್ಪ ಇದ್ದರು.