ಅಳವಂಡಿ: ವಿದ್ಯೆ, ಬುದ್ದಿ ಕಲಿತವರು ಬ್ರಷ್ಟರಾಗಬಹುದು ಆದರೆ ಸಂಸ್ಕೃತಿ ಕಲಿತವರು ಬ್ರಷ್ಟರಾಗಲಾರರು ಎಂದು ಕೊಪ್ಪಳ ಜಿಲ್ಲಾ ಏಕಲ್ ಅಭಿಯಾನದ ಅಂಚಲ್ ಸಮಿತಿ ಅಧ್ಯಕ್ಷ ಗುರುದತ್ ತಿಳಿಸಿದರು.
ಸಮೀಪದ ಭೈರಾಪುರದ ಶ್ರೀರಾಮ ಮಂದಿರದಲ್ಲಿ ವನಬಂಧು ಪರಿಷತ್, ಏಕಲ್ ಅಭಿಯಾನ ಕರ್ನಾಟಕ, ಕೊಪ್ಪಳ ಅಂಚಲ್ ವತಿಯಿಂದ ಆಯೋಜಸಿದ್ದ ಪ್ರಾಥಮಿಕ ವರ್ಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಭಾರತಮಾತೆ ಭಾವಚಿತ್ರ ಹಾಗೂ ಶ್ರೀಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಹೂ ಮಾಲೆ ಅರ್ಪಿಸಿ ಮಾತನಾಡಿದರು.
ಇದನ್ನೂ ಓದಿ: ಜಕ್ಕಲಿ ಗ್ರಾಮದಲ್ಲಿ ರಕ್ತದಾನ ಶಿಬಿರ
ಶಿಬಿರಾರ್ಥಿಗಳು ಶಿಸ್ತು, ಸಮಯಪ್ರಜ್ಞೆ, ಧರ್ಮ, ಸಂಸ್ಕಾರ ಶಿಕ್ಷಣ, ದೇಶಪ್ರೇಮ ಬೆಳೆಸಿಕೊಳ್ಳಬೇಕು. ಜಗತ್ತು ಒಂದು ಕುಟುಂಬ ಇದ್ದ ಹಾಗೇ ನಾವು ಇಲ್ಲಿ ಸದಸ್ಯರಾಗಿದ್ದೇವೆ. ಧರ್ಮವನ್ನು ನಾವು ಉಳಿಸಬೇಕು ಹಾಗೂ ಅದರ ಜೊತೆ ಬೆಳೆಯಬೇಕು. ದೇಶದ ಸಂಸ್ಕೃತಿ ಮೇಲೆ ಆಗುವ ಆಕ್ರಮಣಗಳನ್ನು ಮೆಟ್ಟಿ ನಿಂತು ದೇಶದ ಸಂಸ್ಕೃತಿ ಉಳಿಸಿ ಬೆಳೆಸಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ದೇಶಾಭಿಮಾನ, ದೇವರು, ಧರ್ಮ, ಸಂಸ್ಕೃತಿ, ಅಭಿಮಾನ ಬೆಳೆಸಲು ಮುಂದಾಗಬೇಕು ಎಂದರು.
ಪ್ರಮುಖರಾದ ಸಿದ್ದರಡ್ಡಿ ಮೈನಳ್ಳಿ, ಭರಮಪ್ಪ ಕರಡಿ, ಭರಮಗೌಡ ಪೋಲಿಸಪಾಟೀಲ, ರಮೇಶ ಗೋಸಲದೊಡ್ಡಿ, ಶರಣಮ್ಮ, ಪಾರ್ವತಿ, ಭವ್ಯ, ದೇವಮ್ಮ, ರಮೇಶ, ಮುತ್ತಮ್ಮ, ರೇಣುಕಾ, ಹನುಮಗೌಡ, ನಾಗರಾಜ, ಮಂಜುನಾಥ, ಬಾಲನಗೌಡ, ಮಂಜುಳಾ ಹಾಗೂ ಇತರರು ಇದ್ದರು.