ವಿಜಯಪುರದ ಹೊರ ವಲಯದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಕುಲಸಚಿವ ಶಂಖರಗೌಡ ಸೋಮನಾಳ ಸಸಿಗೆ ನೀರೆರೆದರು. ಪ್ರೊ. ಶಾಂತಾದೇವಿ ಟಿ., ಡಾ. ಬಾಬು ಸಜ್ಜನ, ಡಾ. ನಟರಾಜ ದುರ್ಗಣ್ಣವರ ಮತ್ತಿತರರಿದ್ದಾರೆ. 
ಜಿಲ್ಲೆ

ಪರಿಸರ ಉಳಿಸಿ, ಬೆಳೆಸಿ

ಗಿರೀಶ ಸಗರ

ವಿಜಯಪುರ: ಪರಿಸರ ಕಾಳಜಿಯ ಜತೆಗೆ ಸುಸ್ಥಿರ ಅಭಿವೃದ್ಧಿಯು ಸಮಾಜಕ್ಕೆ ಮುಖ್ಯ. ಈ ಹಿನ್ನೆಲೆ ನಾವೆಲ್ಲರೂ ಪರಿಸರ ಉಳಿಸಿ ಬೆಳೆಸುವ ಕಾರ್ಯಕ್ಕೆ ತೊಡಗಬೇಕೆಂದು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಿಇಒ ಡಾ. ಬಾಬು ಸಜ್ಜನ ಹೇಳಿದರು.

ನಗರ ಹೊರ ವಲಯದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸೋಮವಾರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಸಸ್ಯಶಾಸ ಅಧ್ಯಯನ ವಿಭಾಗ ಸೇರಿ ಮತ್ತಿತರ ವಿಭಾಗಗಳ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಶಂಕರಗೌಡ ಎಸ್​. ಸೋಮನಾಳ ಮಾತನಾಡಿ, ಸಾಮಾಜಿಕ ಮುಖ್ಯ ವಾಹಿನಿಗೆ ಹೊಸ&ಹೊಸ ಕಾರ್ಯಾಚರಣೆ ಮೂಲಕ ಪರಿಸರ ಬೆಳೆಸುವ ಸಿದ್ಧಾಂತದ ಪ್ರಯೋಗ ಕಡ್ಡಾಯವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ, ಕರ್ತವ್ಯ ಹೊಂದಬೇಕು. ವಿವಿ ಆವರಣ ಹಸಿರು ಆವರಣವಾಗಲು ಎಲ್ಲ ಸೌಲ್ಯಭ ಒದಗಿಸುವುದಾಗಿ ಭರವಸೆ ನೀಡಿದರು.

ತಮ್ಮ ಸಂಸ್ಥೆಯ ಪರವಾಗಿ ವಿವಿಗೆ ವಿವಿಧ ಬಗೆಯ 90 ಸಸಿಗಳನ್ನು ನೀಡಿದರು. ಸಮಾಜ ವಿಜ್ಞಾನ ನಿಕಾಯದ ಡೀನ್​ ಪ್ರೊ. ಶಾಂತಾದೇವಿ ಟಿ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರೊ. ಲಕ್ಷಿ$್ಮದೇವಿ ವೈ., ಡಾ. ನಟರಾಜ ದುರ್ಗಣ್ಣವರ, ಡಾ. ಶಶಿಕಲಾ ರಾಠೋಡ, ನಾಮದೇವಗೌಡ, ಗವಿಸಿದ್ದಪ್ಪ ಆನಂದಹಳ್ಳಿ, ಆರ್​.ವಿ. ಗಂಗಶೆಟ್ಟಿ, ಸಕ್ಪಾಲ್​ ಹೂವಣ್ಣ, ಡಾ. ರಮೇಶ ಸೋನಕಾಂಬಳೆ, ಡಾ. ಕೆ.ಪಿ. ಸುರೇಶ, ಡಾ. ಕಲಾವತಿ ಕಾಂಬಳೆ ಮತ್ತಿತರರಿದ್ದರು.