ಸಿಂದಗಿ ಪಟ್ಟಣದ ಪಿಇಎಸ್ ಕಾಲೇಜಿನಲ್ಲಿ ಶುಕ್ರವಾರ ಪಠ್ಯಪೂರಕ ಚಟುವಟಿಕೆ ಹಾಗೂ ಜಾನಪದ ಸಾಹಿತ್ಯದಲ್ಲಿ ಸ್ವಾತಂತ್ರೃ ಚಳವಳಿಯ ಕುರಿತ ಲಾವಣಿ ಪದಗಳ ಸಾಹಿತ್ಯ ಸಂಭ್ರಮವನ್ನು ಪ್ರೊ. ಬಿ.ಆರ್. ಪೊಲೀಸ್‌ಪಾಟೀಲ ಉದ್ಘಾಟಿಸಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಪಿ. ಕರ್ಜಗಿ, ಆಡಳಿತಾಧಿಕಾರಿ ಐ.ಬಿ. ಬಿರಾದಾರ, ನಿವೃತ್ತ ದೈಹಿಕ ಶಿಕ್ಷಣ ಮಾರ್ಗದರ್ಶಕ ಕೆ.ಎಚ್. ಸೋಮಾಪೂರ, ಡಾ. ಚನ್ನಪ್ಪ ಕಟ್ಟಿ ಇತರರಿದ್ದರು. 
ಜಿಲ್ಲೆ

ನಾಡಿನ ಸಂಸ್ಕೃತಿ ಉಳಿಸಿ ಬೆಳೆಸಿ - ಜಾನಪದ ಸಾಹಿತಿ ಪೊಲೀಸ್‌ಪಾಟೀಲ ಹೇಳಿಕೆ

ಸಿಂದಗಿ: ಯುವ ಪೀಳಿಗೆ ನಮ್ಮ ನಾಡಿನ ಸಂಸ್ಕೃತಿ ಉಳಿಸಿ ಬೇಳೆಸಲು ಮುಂದಾಗಬೇಕಿದೆ ಎಂದು ಪ್ರೊ. ಬಿ.ಆರ್. ಪೊಲೀಸ್‌ಪಾಟೀಲ ಹೇಳಿದರು.

ಪಟ್ಟಣದ ಪಿಇಎಸ್ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಪಠ್ಯಪೂರಕ ಚಟುವಟಿಕೆ ಹಾಗೂ ಜಾನಪದ ಸಾಹಿತ್ಯದಲ್ಲಿ ಸ್ವಾತಂತ್ರ್ಯ ಚಳವಳಿ ಕುರಿತ ಲಾವಣಿ ಪದಗಳ ಸಾಹಿತ್ಯ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣರು ಸತ್ಯ ಘಟನೆಗಳನ್ನು ನಿಷ್ಠುರವಾಗಿದ್ದು, ಲಾವಣಿ ಪದಗಳ ಮೂಲಕ ಇದು ಮನರಂಜನೆಯ ಜತೆಗೆ ಜನಜಾಗೃತಿಗೂ ಬಳಕೆಯಾಗಿತ್ತು. ಸದ್ಯದ ವೈಜ್ಞಾನಿಕ ಯುಗದಲ್ಲಿ ಇವು ಕಣ್ಮರೆಯಾಗುತ್ತಿವೆ ಎಂದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಪಿ. ಕರ್ಜಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಜತೆಗೆ ವ್ಯಕ್ತಿತ್ವ ವಿಕಸನಕ್ಕಾಗಿ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಈ ವೇಳೆ 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣವಾದ ವಿದ್ಯಾರ್ಥಿಗಳಿಗೆ ಪಿಇಎಸ್ ಸಂಸ್ಥೆ ಪರ ಸನ್ಮಾನಿಸಲಾಯಿತು.

ಆಡಳಿತಾಧಿಕಾರಿ ಐ.ಬಿ. ಬಿರಾದಾರ, ನಿವೃತ್ತ ದೈಹಿಕ ಶಿಕ್ಷಣ ಮಾರ್ಗದರ್ಶಕ ಕೆ.ಎಚ್. ಸೋಮಾಪೂರ, ಹಿರಿಯ ಸಾಹಿತಿ ಡಾ.ಎಂ.ಎಂ. ಪಡಶೆಟ್ಟಿ, ಡಾ. ಚನ್ನಪ್ಪ ಕಟ್ಟಿ, ಹಿರಿಯ ಉಪನ್ಯಾಸಕ ಎಸ್.ವೈ. ಬೀಳಗಿ, ಪಿ.ಎಂ. ಮಡಿವಾಳರ, ನಿವೃತ್ತ ಪ್ರಾಚಾರ್ಯ ಬಿ.ಎಂ. ಬಿರಾದಾರ, ಉಪನ್ಯಾಸಕ ಬಿ.ಎಂ. ಬಿರಾದಾರ, ಆರ್.ಬಿ. ಯಂಕಂಚಿ, ಬಿ.ಆರ್. ಬಿರಾದಾರ, ಎಂ.ಸಿ. ಹೊಸಮನಿ ಹಾಗೂ ಉಪನ್ಯಾಸಕಿಯರು, ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕುಮಾರಿ ಭಾಗ್ಯಶ್ರೀ ಡಂಬಳ ಉಪಸ್ಥಿತರಿದ್ದರು.

ಪದವಿ ಕಾಲೇಜ್ ಪ್ರಾಚಾರ್ಯ ಜಿ.ಎಸ್. ಕಡಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಪೂ ಕಾಲೇಜ್ ಪ್ರಾಚಾರ್ಯ ಆರ್.ಬಿ. ಗೋಡಕರ ಸ್ವಾಗತಿಸಿದರು. ವಿ.ವಿ. ಪಾಟೀಲ ನಿರೂಪಿಸಿದರು. ಪ್ರೊ. ಎಸ್.ಎಸ್. ವಾಲೀಕಾರ ವಂದಿಸಿದರು.