ಜಿಲ್ಲೆ

ಹೊಸರಿತ್ತಿ ಲಾಕಪ್ ಡೆತ್ ಸಂಶಯ ಕೇಸ್ ಸಿಐಡಿ ತನಿಖೆಗೆ ಬೊಮ್ಮಾಯಿ‌ ಆಗ್ರಹ

ಕೇಶವಮೂರ್ತಿ ಬೇಲೂರಪ್ಪನವರ

ಸವಣೂರು: ಪಟ್ಟಣದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ.

ಹಾವೇರಿ ತಾಲೂಕಿನ ಹೊಸರಿತ್ತಿ ಪೊಲೀಸ್ ಠಾಣೆಯಲ್ಲಿ ನಡೆದಿದೆ ಎನ್ನಲಾದ ಲಾಕಪ್ ಡೆತ್ ಪ್ರಕರಣವನ್ನು ಸಿಐಡಿ ತನಿಖೆ ಮಾಡುವಂತೆ ಬೊಮ್ಮಾಯಿ ಆಗ್ರಹಿಸಿದರು.

ಈಗಾಗಲೇ ಡಿಜಿಯವರ ಗಮನಕ್ಕೆ ‌ನಾನು ಒಂದು ಪತ್ರ ಬರೆದಿದ್ದೇನೆ. ಈ ಪ್ರಕರಣ ಸ್ಥಳೀಯ ಪೊಲೀಸರಿಂದ ವಿಚಾರಣೆ ಸಾಧ್ಯವಿಲ್ಲ. ಸಿಐಡಿ ಯಿಂದ ವಿಚಾರಣೆ ಆಗಬೇಕು. ಸ್ಪಷ್ಟವಾಗಿ ಏನೇನು ನಡೆದಿದೆ ಎಂದು ತನಿಖೆ ಆಗಬೇಕು. ಬಹಳಷ್ಟು ಸಂಶಯಗಳಿವೆ.

ಮೇಲ್ನೋಟಕ್ಕೆ ಪೊಲೀಸರ ಹಲ್ಲೆಯಿಂದ ವ್ಯಕ್ತಿ ಅಸ್ತವ್ಯಸ್ತವಾಗಿ ಮೃತಪಟ್ಟಿದ್ದಾನೆಂದು ಅನಿಸುತ್ತಿದೆ

ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹ ಮಾಡಿದ್ದೇನೆ. ಮಾಡಿಯೇ ತೀರುತ್ತೇವೆ ಎಂದರು.

ಲಾಕಪ್ ಡೆತ್ ಸಂಶಯದ ಕುರಿತು "ವಿಜಯವಾಣಿ" ಪತ್ರಿಕೆ ಮೊದಲು ದನಿ ಎತ್ತಿತ್ತು. ಸರಣಿ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಮಾಜಿ ಸಿಎಂ ಬೊಮ್ಮಾಯಿ‌ ಸಿಐಡಿಗೆ ಒತ್ತಾಯಿಸಿದ್ದಾರೆ.