ಜಿಲ್ಲೆ

ಸವಣೂರ ಪತ್ರಿಕಾ ವಿತರಕರ ಸಂಘ ಉದ್ಘಾಟನೆ 20ರಂದು

Haveri - Desk - Ganapati Bhat

ಸವಣೂರ: ಪತ್ರಕರ್ತರ ಸಂಘ, ವಿತರಕರ ಸಂಘ ಬೇರೆ ಅಲ್ಲ, ಎಲ್ಲರೂ ಸೇರಿ ಸಂಘವನ್ನು ಬಲಿಷ್ಠಗೊಳಿಸಬೇಕು. ಸಾಮಾಜಿಕ ಕಾರ್ಯದೊಂದಿಗೆ ಜು. 20ರಂದು ಪತ್ರಿಕಾ ವಿತರಕರ ತಾಲೂಕು ಸಂಘದ ಉದ್ಘಾಟನೆಯೊಂದಿಗೆ ಪತ್ರಿಕಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಮತ್ತಿಗಟ್ಟಿ ಹೇಳಿದರು.

ಪಟ್ಟಣದ ಐಬಿಯಲ್ಲಿ ಭಾನುವಾರ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪತ್ರಿಕಾ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿತರಕರ ಸಂಘದ ನೂತನ ಅಧ್ಯಕ್ಷ ಶಂಕ್ರಯ್ಯ ಹಿರೇಮಠ ಮಾತನಾಡಿ, 38ಕ್ಕೂ ಹೆಚ್ಚಿನ ವಿತರಕರು ಸಂಘದ ಸದಸ್ಯತ್ವ ಪಡೆದಿದ್ದಾರೆ. ಪದಾಧಿಕಾರಿಗಳು ಕಡ್ಡಾಯವಾಗಿ ತಮ್ಮ ಹುದ್ದೆಯ ಅನುಸಾರವಾಗಿ ಕೆಲಸ ಮಾಡಬೇಕು ಎಂದರು.

ಪತ್ರಿಕಾ ದಿನ ಆಚರಣೆ, ಸಂಘದ ಪದಾಧಿಕಾರಿಗಳ ಮರು ಆಯ್ಕೆ, ಸಂಘದ ಖರ್ಚು-ವೆಚ್ಚ, ಸಂಘದ ಉದ್ಘಾಟನೆ, ರಾಜ್ಯ ಪತ್ರಿಕಾ ವಿತರಕರ ಸಂಘದ ಐಡಿ ಕಾರ್ಡ್(ಗುರುತಿನ ಪತ್ರ) ಮಾಡಿಸುವ ಕುರಿತು, ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರದ ಕುರಿತು ರ್ಚಚಿಸಿ ನಿರ್ಣಯ ಕೈಗೊಳ್ಳಲಾಯಿತು.

ಪದಾಧಿಕಾರಿಗಳಾದ ಅಶೋಕ ಕಾಳಶೆಟ್ಟಿ, ಗಣೇಶಗೌಡ ಪಾಟೀಲ, ಅಶೋಕ ಕಳಲಕೊಂಡ, ರಾಜಶೇಖರ ಗುರುಸ್ವಾಮಿಮಠ, ಯೋಗೇಂದ್ರ ಜಂಬಗಿ, ನಿಂಗನಗೌಡ ದೊಡ್ಡಗೌಡ್ರ, ಅಶೋಕ ಉಳ್ಳಟ್ಟಿ, ಮಂಜುನಾಥ ಪಿಳ್ಳಿ, ರುದ್ರಮುನಿ ಹಿರೇಮಠ, ಸುರೇಶ ಬಾಣಪ್ಪನವರ, ಆನಂದ ಬಡ್ನಿ, ಉಳವಯ್ಯಾ ಹಿರೇಮಠ, ನಿಂಗಪ್ಪ ನಾಗನೂರ ಇತರರಿದ್ದರು.

ನೂತನ ಪದಾಧಿಕಾರಿಗಳ ಆಯ್ಕೆ

ಪತ್ರಿಕಾ ವಿತರಕರ ತಾಲೂಕು ಸಂಘದ ಗೌರವಾಧ್ಯಕ್ಷರಾಗಿ ನಾಗರಾಜ ಕೂರಗೋಡಿ, ಅಧ್ಯಕ್ಷರಾಗಿ ಶಂಕ್ರಯ್ಯ ಹಿರೇಮಠ, ಉಪಾಧ್ಯಕ್ಷರಾಗಿ ರಾಮು ಕುಂದ್ರಳ್ಳಿ ಅವಿರೋಧವಾಗಿ ಆಯ್ಕೆಯಾದರು. ಚಂದ್ರಶೇಖರ ಅಕ್ಕಿ ಕಾರ್ಯದರ್ಶಿಯಾಗಿ, ಪರಮೇಶ ಮಲ್ಲಮ್ಮನವರ ಸಂಘಟನಾ ಕಾರ್ಯದರ್ಶಿಯಾಗಿ, ಸಂತೋಷ ಖಾನಗೌಡ್ರ ಖಜಾಂಚಿಯಾಗಿ ಅವರು ಆಯ್ಕೆಗೊಂಡರು.