ಜಿಲ್ಲೆ

ಮಕ್ಕಳು ಮೃತಪಟ್ಟ ನೋವಿನಿಂದ ನದಿಗೆ ಹಾರಿ ವೃದ್ಧ ಆತ್ಮಹತ್ಯೆ

Haveri - Kariyappa Aralikatti

ಸವಣೂರ: ತನ್ನ ಮೂರು ಮಕ್ಕಳು ಅಕಾಲಿಕ ಕಾರಣದಿಂದ ಮೃತಪಟ್ಟಿದ್ದರಿಂದ ಮನನೊಂದ ವೃದ್ಧ ವರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬರದೂರ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.
ಗ್ರಾಮದ ದೇವೇಂದ್ರಪ್ಪ ಈರಪ್ಪ ಹಡಪದ (72) ಮೃತರು.
ಇವರ ಮೂವರು ಮಕ್ಕಳು ಅಕಾಲಿಕ ಕಾರಣದಿಂದ ಮೃತಪಟ್ಟಿದ್ದರು. ಇದರಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.