ಜಿಲ್ಲೆ

7 ತಾಸು ನಿರಂತರ ವಿದ್ಯುತ್ ಪೂರೈಸಿ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಸವಣೂರ: ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ, ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ತಾಲೂಕು ಘಟಕದಿಂದ ಶುಕ್ರವಾರ ಕಂದಾಯ ಇಲಾಖೆ ಶಿರಸ್ತೇದಾರ್ ತ್ರಿವೇಣಿ ನೀರಲಕಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಾಲ ಮಾಡಿ ಬಿತ್ತನೆ ಮಾಡಲಾಗಿದ್ದು, ಅಲ್ಪಸ್ವಲ್ಪ ಮಳೆಗೆ ಬೆಳೆ ಬೆಳೆದು ನಿಂತಿವೆ. ಬಳಿಕ ಮಳೆ ಆಗದ್ದರಿಂದ ಫಸಲು ಒಣಗಿ ಹೋಗಿವೆ. ನೀರಾವರಿ ಜಮೀನುಗಳಲ್ಲಿ ಬೆಳೆದ ಅಲ್ಪ ಬೆಳೆ ಉಳಿಸಿಕೊಳ್ಳಬೇಕು ಅಂದರೆ 5 ತಾಸು ವಿದ್ಯುತ್ ಪೂರೈಕೆಯಿಂದ ಅದಕ್ಕೂ ತೊಂದರೆಯಾಗಿದೆ. ಹೀಗಾಗಿ, 7 ತಾಸು ನಿರಂತರ ವಿದ್ಯುತ್ ನೀಡಬೇಕು. ಜಿಲ್ಲೆಯ ಇನ್ನುಳಿದ 3 ತಾಲೂಕುಗಳನ್ನು ಬರಗಾಲಪೀಡಿತವೆಂದು ಘೋಷಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಹೆಸ್ಕಾಂ ಕಚೇರಿಯಲ್ಲಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಡಿ.ಬಿ. ಸೋಮಶೇಖರಗೌಡ, ತಾಲೂಕು ಘಟಕ ಅಧ್ಯಕ್ಷ ಚನ್ನಬಸವ ಹುಲಗೂರ, ಹನುಮಂತಪ್ಪ ಬಂಡಿವಡ್ಡರ, ಬಸನಗೌಡ ಪಾಟೀಲ, ಸುರೇಶ, ಹುನಮಂತಪ್ಪ, ಕುಮಾರ ಬಂಡಿವಡ್ಡರ, ಮಂಜುನಾಥ ಮೇಟಿ, ಹನುಮಂತಗೌಡ ಪಾಟೀಲ, ಮಹಮ್ಮದಶಫಿ, ನಾಗೇಶ ಬೆಳವಿಗಿ, ಪ್ರಕಾಶ ಗುಂಜಳ, ಮಹಾದೇವಪ್ಪ ಶಿಗ್ಲಿ, ಪುಟ್ಟಪ್ಪ ಲಮಾಣಿ, ವೀರಪ್ಪ ಬಳಿಗಾರ, ಯಲ್ಲಪ್ಪ ಬಾರ್ಕಿ, ಮಂಜುನಾಥ ತಳವಾರ, ಬಸವರಾಜ ಕಳಸದ, ಈರಣ್ಣ ಸಂಶಿ ಇತರರು ಇದ್ದರು.