ಸವಣೂರ: ಜಮೀನಿನಲ್ಲಿ ಬೋರ್‌ವೆಲ್ ಯಂತ್ರ ಚಾಲೂ ಮಾಡಲು ಹೋದ ರೈತ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ತಾಲೂಕಿನ ತೊಂಡೂರ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ಮಲ್ಲಪ್ಪ ದುರಗಪ್ಪ ದೊಡ್ಡಮನಿ (49) ಮೃತ ರೈತ.
ಇವರು ಜಮೀನಿನಲ್ಲಿ ಬೆಳೆಗಳಿಗೆ ನೀರು ಹಾಯಿಸಲು ಬೋರ್‌ವೆಲ್ ಚಾಲೂ ಮಾಡಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.