ಜಿಲ್ಲೆ

ಹೆಚ್ಚು ಅಂಕ ಗಳಿಸಲು ವಿದ್ಯಾರ್ಥಿ ಮಿತ್ರ ಸಹಕಾರಿ; ಚಳ್ಳಾಳ ಗ್ರಾಮದ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿ ಜಿ.ಕೆ.ಜವಳಿ ಹೇಳಿಕೆ

ಕೇಶವಮೂರ್ತಿ ಬೇಲೂರಪ್ಪನವರ

ಸವಣೂರ: ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಹಾಗೂ ಹೆಚ್ಚಿನ ಜ್ಞಾನ ಪಡೆಯಲು ವಿಜಯವಾಣಿ ವಿದ್ಯಾರ್ಥಿ ಮಿತ್ರ ಸಹಕಾರಿಯಾಗಿದೆ ಎಂದು ತಾಲೂಕಿನ ಚಳ್ಳಾಳ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಜಿ.ಕೆ.ಜವಳಿ ಹೇಳಿದರು.
ಗ್ರಾಮದ ಹಿರಿಯರಾದ ನಿರೇಶಪ್ಪ ಯಮನಪ್ಪ ಯರೇಶೀಮಿ ನೇತೃತ್ವದಲ್ಲಿ ಶನಿವಾರ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆಗಳನ್ನು ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಿರೇಶಪ್ಪ ಯರೇಶಿಮಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಮಿತ್ರ ವಿತರಿಸುತ್ತಿರುವುದು ಸಂತಸದ ವಿಷಯ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಂಡು ಉತ್ತಮವಾಗಿ ವ್ಯಾಸಂಗ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಹಿರಿಯ ಶಿಕ್ಷಕ ಎಸ್.ಎಚ್. ಯರಬಾಳ, ಗ್ರಾಮದ ಸುರೇಶ ಕಳ್ಳಿಮನಿ, ಕುರುಬರ ಮಲ್ಲೂರ ಗ್ರಾಪಂ ಸದಸ್ಯ, ಪತ್ರಿಕಾ ವಿತರಕ ಅನಿಲಕುಮಾರ ಹೊಂಬಳದ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.