ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ, ಮರಾಠಿ ಭಾಷಾ ಬಾಂಧವ್ಯ ಬಲವರ್ಧನೆಗೊಳಿಸುವಲ್ಲಿ ಸಾಹಿತ್ಯದ ಮೂಲಕ ಶ್ರಮಿಸಿದ ಮಹನೀಯರ ಸಾಧನೆ ಗುರುತಿಸಿ ಡಾ. ಬೆಟಗೇರಿ ಕೃಷ್ಣಶರ್ಮರ ಜನ್ಮದಿನ ನಿಮಿತ್ತ ಅವರ ಕಾವ್ಯನಾಮದ ಹೆಸರಿನಲ್ಲಿ ನೀಡುವ ಆನಂದಕಂದ ಪ್ರಶಸ್ತಿಗೆ ಮೋಡಿ ಲಿಪಿ ತ ಡಾ. ಎಂ.ವೈ. ಸಾವಂತ ಆಯ್ಕೆಯಾಗಿದ್ದಾರೆ.
ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ಸ್ಥಾಪಿಸಿರುವ ಪಂ. ಅವಳೀಕರ ದತ್ತಿ ನಿಧಿ ಅಡಿ ಪ್ರಶಸ್ತಿ ನೀಡಲಾಗುತ್ತಿದ್ದು, 2024ನೇ ಸಾಲಿನ ಪ್ರಶಸ್ತಿಯನ್ನು ಎಂ.ವೈ. ಸಾವಂತ ಅವರಿಗೆ ನೀಡಲಾಗುತ್ತಿದೆ. ಏ. 16ರಂದು ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.