ಸವದತ್ತಿ: ಸುಮಾರು 42 ವರ್ಷಗಳ ಬಳಿಕ ಗ್ರಾಮದೇವಿ ಜಾತ್ರೆ ನಡೆಯುತ್ತಿದ್ದು, ಪಾತೀತ, ಜಾತ್ಯತಿತವಾಗಿ ಎಲ್ಲರೂ ಒಗ್ಗೂಡಿ ಜಾತ್ರೆ ಯಶಸ್ಸಿಗೆ ಶ್ರಮಿಸೋಣ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಇಲ್ಲಿನ ಮಾಮನಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕನಿಷ್ಠ 3 ವರ್ಷದ ಹಣಕಾಸು ವರದಿ ಲಭ್ಯವಿದ್ದರೆ ಸಾಂಸತಿಕ ಕಾರ್ಯಕ್ರಮ ನಡೆಸಲು ಕನ್ನಡ ಮತ್ತು ಸಂಸತಿ ಇಲಾಖೆಯಿಂದ ಸುಮಾರು 1 ಕೋಟಿ ರೂ. ಅನುದಾನ ದೊರೆಯುತ್ತಿತ್ತು. ಅನುದಾನ ತರಲು ಪ್ರಯತ್ನಿಸಲಾಗುವುದು ಗ್ರಾಮದೇವಿ ದೇವಸ್ಥಾನದ ಮೇಲ್ಛಾವಣಿ ನವೀಕರಣಗೊಳಿಸಲಾಗುವುದು. ಅಲ್ಲದೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಪಟ್ಟಣದಲ್ಲಿ ಮೂಲಸೌಕರ್ಯ ಒದಗಿಸಲು ಕ್ರಮ ವಹಿಸಲಾಗುವುದು. ಮುಂಬರುವ ದಿನಗಳಲ್ಲಿ ಐದು ವರ್ಷಕ್ಕೊಮ್ಮೆ ಜಾತ್ರೆ ಮಾಡಿದರೆ ಸೂಕ್ತ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾ ಮಾಮನಿ ಮಾತನಾಡಿ, 2026ರ ಮೇ ತಿಂಗಳಿನಲ್ಲಿ ಗ್ರಾಮದೇವಿ ಜಾತ್ರೆ ನಡೆಸಲು ಎಲ್ಲ ಹಿರಿಯರು ತೀರ್ಮಾನಿಸಿದ್ದಾರೆ. ಪೂರ್ವ ಸಿದ್ಧತೆ ಕುರಿತು ಅಭಿಪ್ರಾಯ ಸಂಗ್ರಹಿಸಿ ಜವಾಬ್ದಾರಿ ವಹಿಸಲಾಗುತ್ತಿದೆ. ಜಾತ್ರೆಗೆ ಯಶಸ್ಸಿಗೆ ಈಗಾಗಲೇ 18 ಸಮಿತಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮುಖಂಡ ಸದಾಶಿವ ಕೌಜಲಗಿ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ಟಿಎಚ್ಒ ಡಾ.ಶ್ರೀಪಾದ ಸಬನೀಸ್ ಮಾತನಾಡಿದರು ನೀಲಪ್ಪ ಅಣ್ಣಿಗೇರಿ, ಮಹಾಬಳೇಶ್ವರ ಪುರದಗುಡಿ, ಚಂದ್ರು ಶ್ಯಾಮರಾಯನವರ, ರಾಜಶೇಖರ ಕಾರದಗಿ, ಡಾ.ಎನ್.ಸಿ. ಬೆಂಡಿಗೇರಿ, ಬಿ.ಎನ್.ಪ್ರಭುನವರ,
ಮಂಜುನಾಥ ಪಾಚಂಗಿ, ಪ್ರಭು ಪ್ರಭುನವರ, ಶ್ರೀಶೈಲ ಮುತಗೊಂಡ, ಶಿವಾನಂದ ಹೂಗಾರ, ಮಲ್ಲಿಕಾರ್ಜುನ ಪುರದಗುಡಿ, ಮಲ್ಲಿಕಾರ್ಜುನ ಬೇವೂರ, ಬಸವರಾಜ ಕಾರದಗಿ, ಜಗದೀಶ ಶಿಂತ್ರಿ, ಲಕ್ಷ$್ಮಣ ಕುಲಕರ್ಣಿ, ಮಲ್ಲು ಬೀಳಗಿ, ಸಿದ್ದಯ್ಯ ವಡಿಯರ, ಸುಭಾಸಸಿಂಗ್ ರಜಪೂತ ಇತರರಿದ್ದರು.