ಜಿಲ್ಲೆ

ಸಾಲುಮರದ ತಿಮ್ಮಕ್ಕಳ ಪರಿಸರ ಕಾಳಜಿ ಮಾದರಿ

ಪ್ರಶಾಂತ ಹೂಗಾರ

ಕಾಗವಾಡ: ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಪರಿಸರ ಕಾಳಜಿ ಪ್ರತಿಯೊಬ್ಬರಿಗೂ ಪ್ರೇರಣೆ ನೀಡುತ್ತದೆ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.

ತಾಲೂಕಿನ ಕೆಂಪವಾಡದ ಅಥಣಿ ಶುಗರ್ಸ್ ಕಾರ್ಖಾನೆ ಆವರಣದಲ್ಲಿ ಸಾಲುಮರದ ತಿಮ್ಮಕ್ಕಳ ಜನ್ಮದಿನದ ಪ್ರಯುಕ್ತ ಸಸಿ ನೆಡುವ ಮೂಲಕ ವೃಕ್ಷಮಾತೆಗೆ ಗೌರವದ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಮರಗಳೇ ನನ್ನ ಮಕ್ಕಳು ಎಂದು ಸಾವಿರಾರು ಮರಗಳನ್ನು ಜೋಪಾನ ಮಾಡಿರುವ ಹೆಮ್ಮೆಯ ವೃಕ್ಷಮಾತೆ ತಿಮ್ಮಕ್ಕ. ಪರಿಸರ ಸಂರಕ್ಷಣೆ ಹಾಗೂ ಪರಿಸರದ ಮಹತ್ವವನ್ನು ಯುವಪೀಳಿಗೆಗೆ ತಿಳಿಸಬೇಕಿದೆ. ಅವರಲ್ಲಿದ್ದ ಪರಿಸರ ಕಾಳಜಿ ಪರಂಪರೆ ಮುಂದುವರಿಸಲು ಸಸಿ ನೆಡುವ ಕಾರ್ಯವಾಗಬೇಕು ಎಂದರು.

ಬಿಜೆಪಿ ಕಾಗವಾಡ ಮಂಡಲ ಅಧ್ಯಕ್ಷ ಅರುಣ ಗಣೇಶವಾಡಿ, ಮುಖಂಡರಾದ ದಾದಾಗೌಡ ಪಾಟೀಲ, ಪ್ರಕಾಶ ಚೌಗುಲೆ, ರಾಕೇಶ ಪಾಟೀಲ, ಅಶೋಕ ಮಾನೆ, ವಿಶ್ವನಾಥ ದೇವಮಾನೆ, ರಾಜು ಬಿಷ್ಠನ್ನವರ ಇತರರಿದ್ದರು.