ಜಿಲ್ಲೆ

ಸೌಜನ್ಯ ಪ್ರಕರಣ ಮರುತನಿಖೆಗೆ ಪೋಸ್ಟ್​ ಕಾರ್ಡ್​ ಮನವಿ

ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ ವತಿಯಿಂದ ಸೌಜನ್ಯ ಹತ್ಯೆ ಪ್ರಕರಣ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಮರು ತನಿಖೆಗೆ ಆದೇಶಿಸಬೇಕು. ನೈಜ ಅಪರಾಧಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ನಗರದ ವಿವಿಧ ಕಾಲೇಜು ಮತ್ತು ಹಾಸ್ಟೆಲ್ಗಳಲ್ಲಿ ಬುಧವಾರ ಪೋಸ್ಟ್​ ಕಾರ್ಡ್​ ಚಳುವಳಿ ನಡೆಸಲಾಯಿತು. 400ಕ್ಕೂ ಅಧಿಕ ವಿದ್ಯಾರ್ಥಿಗಳು ಪೋಸ್ಟ್​ ಕಾರ್ಡ್​ ನ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸುಮುಖ ಭಟ್​, ಜಿಲ್ಲಾ ಸಂಚಾಲಕ ಗಣೇಶ್​ ಪೂಜಾರಿ, ನಗರ ಕಾರ್ಯದರ್ಶಿ ಶ್ರೀವತ್ಸ , ಸಹ-ಕಾರ್ಯದರ್ಶಿ ಕಾರ್ತಿಕ್​ ಮತ್ತು ಭಾವನ ವಿದ್ಯಾರ್ಥಿನಿ ಪ್ರಮುಖ್​ ಸಂಹಿತಾ ಶಾಸ್ತ್ರಿ ಹಾಗೂ ಕಾರ್ಯಕರ್ತರಾದ ರವಿಚಂದ್ರ, ಪ್ರಸನ್ನ, ಪ್ರದಿಪ್​, ರಕ್ಷಿತ್​, ಪ್ರಶ್ಮಾ , ಮನು ಶೆಟ್ಟಿ ಭಾಗವಹಿಸಿದ್ದರು.