ಜಿಲ್ಲೆ

ನೋಡುಗರ ಗಮನ ಸೆಳೆಯುತ್ತಿರುವ ಸೌಗಂಧಿಕಾ ಕಲಾ ಪ್ರದರ್ಶನ

ಬೆಂಗಳೂರು:ಬನಶಂಕರಿ 2ನೇ ಹಂತದ ಫಿಡಿಲಿಟಸ್​ ಗ್ಯಾಲರಿಯಲ್ಲಿ ಆಯೋಜಿಸಿರುವ "ಸೌಗಂಧಿಕಾ' ಕಲಾ ಪ್ರದರ್ಶನ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ. ಮೇ 18ರವರೆಗೆ ಪ್ರತಿ ನಿತ್ಯ ಬೆಳಗ್ಗೆ 11 ಗಂಟೆಯಿಂದ 5 ಗಂಟೆವರೆಗೆ ಪ್ರದರ್ಶನ ಇರಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

ಕಲಾವಿದೆ ಎಚ್​.ಬಿಂದುಮತಿ ಅವರ ಏಕವ್ಯಕ್ತಿ ಕಲಾಕೃತಿಗಳು ನೋಡುಗರ ಗಮನ ಸೆಳೆಯುತ್ತಿವೆ.ಹಿರಿಯ ಕಲಾವಿದ ಎ.ಎಂ. ಪ್ರಕಾಶ್​ ಮಾತನಾಡಿ, ಪ್ರತಿಭಾನ್ವಿತ ಕಲಾವಿದರಿಗೆ ಸೂಕ್ತ ವೇದಿಕೆ ದೊರೆಯುವಂತಾಗಬೇಕು.ವೇದಿಕೆ ಸಿಗದಿದ್ದರೆ ಕಲಾವಿದರ ಪ್ರತಿಭೆ ಹೊರ ಬರುವುದಿಲ್ಲ.ಎಚ್​.ಬಿಂದುಮತಿ ರಚಿಸಿರುವ ಪ್ರತಿ ಕಲಾಕೃತಿ ಆಕರ್ಷಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೃತ್ಯ ಕಲಾವಿದೆ ನಿರುಪಮಾ ರಾಜೇಂದ್ರ, ದೃಶ್ಯ ಕಲಾವಿದ ಗಣಪತಿ ಅಗ್ನಿಹೋತ್ರಿ, ಫಿಡಿಲಿಟಸ್​ ಗ್ಯಾಲರಿ ಸಂಸ್ಥಾಪಕ ಅಚ್ಯುತ್​ಗೌಡ ಮತ್ತಿತರರಿದ್ದರು.