ಕಲಾದಗಿಯಲ್ಲಿ ನಡೆದ ಭಗವದ್ಗೀತೆ ಪ್ರವಚನ ಮಾಲಿಕೆಯಲ್ಲಿ ಪ್ರವಚನ ನೀಡಿದ ಪಂ. ರಘೋತ್ತಮಾಚಾರ್ಯ ನಾಗಸಂಪಗಿ ಅವರನ್ನು ಶ್ರೀ ಚಿದಂಬರೇಶ್ವರ ಸೇವಾ ಸಮಿತಿಯಿಂದ ಸತ್ಕರಿಸಲಾಯಿತು. 
ಜಿಲ್ಲೆ

ಸತ್ಯಾತ್ಮತೀರ್ಥ ಶ್ರೀಗಳ ಆಶಯ ಸಾರ್ಥಕ

ಗಿರೀಶ ಸಗರ

ಕಲಾದಗಿ : ಹುಟ್ಟಿದಾಗಿನಿಂದ ಅಂತ್ಯದವರೆಗೂ ಪ್ರತಿಯೊಬ್ಬರೂ ತಿಳಿದುಕೊಂಡು ಬದುಕು ಸಾರ್ಥಕ ಮಾಡಿಕೊಳ್ಳಬಹುದಾದ ಭಗವಂತನ ನಲ್ನುಡಿಯಾದ ಭಗವದ್ಗೀತೆ ಪ್ರವಚನ ಕಾರ್ಯಕ್ರಮ ಬರೀ ನಗರಕ್ಕೆ ಸೀಮಿತಗೊಳಿಸದೆ ಪ್ರತಿ ಗ್ರಾಮೀಣ ಪ್ರದೇಶದಲ್ಲಿಯೂ ನಡೆಯಬೇಕೆಂಬ ಯತಿವರೇಣ್ಯ ಶ್ರೀಮದ್ ಉತ್ತರಾಧಿಮಠದ ಸತ್ಯಾತ್ಮತೀರ್ಥರ ಆಶಯದಂತೆ ಎಲ್ಲೆಡೆ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಖ್ಯಾತ ಆಧ್ಯಾತ್ಮಿಕ ಚಿಂತಕ ಬಾಗಲಕೋಟೆಯ ಪಂ. ರಘೋತ್ತಮಾಚಾರ್ಯ ನಾಗಸಂಪಗಿ ಹೇಳಿದರು.

ಜಿಲ್ಲಾ ವಿಶ್ವ ಮಧ್ವ ಮಂಡಳಿ ಘಟಕ, ಕಲಾದಗಿಯ ಶ್ರೀ ಚಿದಂಬರೇಶ್ವರ ಸೇವಾ ಸಮಿತಿ ಆಶ್ರಯದಲ್ಲಿ ಗ್ರಾಮದ ಶ್ರೀ ಚಿದಂಬರೇಶ್ವರ ಸಭಾಭವನದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ‘ಭಗವದ್ಗೀತೆ ಪ್ರವಚನ’ ಪನ್ನಗೊಳಿಸಿ ಅವರು ಮಾತನಾಡಿದರು.

ಶ್ರೀ ಸತ್ಯಾತ್ಮತೀರ್ಥರು ಹಮ್ಮಿಕೊಂಡಿರುವ ಭಗವದ್ಗೀತೆ ಪ್ರವಚನ ಆಂದೋಲನ ಯಾವ ಪ್ರತಿಲ ಇಲ್ಲದೆ ಬರುವ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲೂ ನಡೆಯಲಿದೆ ಎಂದರು.

ಸ್ಥಳೀಯ ಹಿರಿಯರ ಅಪೇಕ್ಷೆಯಂತೆ ಗಣೇಶ ಚೌತಿ ನಂತರ ಗ್ರಾಮದಲ್ಲಿ ಪ್ರತಿ ತಿಂಗಳು ಮೂರು ದಿನಗಳವರೆಗೆ ಭಗವದ್ಗೀತೆ ಪ್ರವಚನ ಮಾಡಲಾಗುವುದು. ಎಲ್ಲರೂ ಪ್ರವಚನದಲ್ಲಿ ಪಾಲ್ಗೊಳ್ಳಬೇಕು ಎಂದರು.

ಪಂ. ರಘೋತ್ತಮಾಚಾರ್ಯ ನಾಗಸಂಪಗಿ ಅವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು. ಯುವ ಚಿತ್ರ ಕಲಾವಿದ ಸಂದೇಶ ಕುಲಕರ್ಣಿ ಪೆನ್ಸಿಲ್‌ನಿಂದ ಬಿಡಿಸಿ ಸಮರ್ಪಿಸಿದ ತಮ್ಮ ಭಾವಚಿತ್ರ ಕಂಡು ಸಂತಸ ವ್ಯಕ್ತಪಡಿಸಿದರು.

ಬಾಗಲಕೋಟೆ ಜಿಲ್ಲಾ ವಿಶ್ವ ಮಧ್ವ ಮಂಡಳಿ ಘಟಕದ ಆರ್.ಎಸ್. ಕುಲಕರ್ಣಿ, ಸಂಜೀವ ದೇಶಪಾಂಡೆ, ಬಾಬುರಾವ ಜಂಬಗಿ, ಮೋಹನ ದೇಶಪಾಂಡೆ, ಶ್ರೀ ಚಿದಂಬರ ಸೇವಾ ಸಮಿತಿ ಹಿರಿಯರಾದ ಬಾಬುರಾವ ಕುಲಕರ್ಣಿ, ವಿ.ಜಿ. ದೇಶಪಾಂಡೆ, ರಮೇಶ ಮಠ, ಬಾಬುರಾವ ಉಮತಾರ ಇತರರಿದ್ದರು.