ಚಿಕ್ಕಬಳ್ಳಾಪುರ : ತಾಲೂಕಿನ ಮುದ್ದೇನಹಳ್ಳಿಯಸತ್ಯಸಾಯಿ ಲೋಕಸೇವಾ ಸಂಸ್ಥೆಯಲ್ಲಿ ನವರಾತ್ರಿ ಹಬ್ಬದ 6ನೇ ದಿನವಾದ ಮಂಗಳವಾರ ವಿಶೇಷ ಪೂಜೆ, ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನೆರವೇರಿದವು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಮಾತನಾಡಿ, ತ್ಯಾಗ ಮತ್ತು ಸೇವೆಯ ಭದ್ರ ಬುನಾದಿಯ ಕೆಲಸವನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ನೇತೃತ್ವದಲ್ಲಿ ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅರ್ಥಪೂರ್ಣವಾಗಿ ಬದುಕಿ ಸಾರ್ಥಕವಾದ ಬಾಳನ್ನು ಕಾಣುವ ಉತ್ತಮ ಸಂಪ್ರದಾಯಗಳಿರುವಂತಹ ಸ್ಥಳವನ್ನು ಸ್ವರ್ಗ ಎಂಬುದಾಗಿ ಪರಿಗಣಿಸಲಾಗುತ್ತದೆ. ಸವಾಜ, ಧರ್ಮ ಮತ್ತು ಸಂಸ್ಕೃತಿಗಾಗಿ ಕಳಕಳಿಯಿಂದ ತೊಡಗಿಸಿಕೊಂಡಾಗ ಆ ಕ್ಷೇತ್ರವು ತಪೋಭೂಮಿಯಾಗುತ್ತದೆ. ಅದರಂತೆ ಸತ್ಯಸಾಯಿ ಗ್ರಾಮ ದೇಶದ ಭವ್ಯ ಸಂಸ್ಕೃತಿ ಜಾಗೃತಗೊಳಿಸುತ್ತಿದೆ ಎಂದು ತಿಳಿಸಿದರು.
ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಅಧ್ಯಯನ ಮಾಡದ ವಿಷಯಗಳಿಲ್ಲ ಎಂಬ ವಾತಿನಂತೆ ಸದ್ಗುರುಗಳು, ಎಲ್ಲ ಕ್ಷೇತ್ರಗಳಲ್ಲೂ ದೇಶದ ಭವ್ಯ ಪರಂಪರೆಯನ್ನು ಪುನರುದ್ಧಾರಗೊಳಿಸುತ್ತಿದ್ದು, ಮಹಾತ್ಮರು, ಅವತಾರ ಪುರುಷರು ಕಾಲಕಾಲಕ್ಕೆ ಮಣ್ಣಲ್ಲಿ ಅವತರಿಸಿ ಬಂದ ಕಾರಣ, ಭವ್ಯ ಪರಂಪರೆ ಉಳಿದಿದೆ. ಭವಿಷ್ಯದಲ್ಲಿ ಇಡೀ ಪ್ರಪಂಚವೇ ಮತ್ತೊಮ್ಮೆ ಭಾರತದ ಕಡೆಗೆ ದೃಷ್ಟಿ ಹರಿಸಲಿದೆ ಎಂದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಾತನಾಡಿ, ಮನುಷ್ಯ ಜನ್ಮ ದೊರತಿರುವುದೇ ಒಳಿತು ವಾಡುವ ಸಲುವಾಗಿ, ಒಳ್ಳೆಯ ಜಾಗದಲ್ಲಿ ಸತ್ಸಂಗವಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಿರುಚಿಯ ಅಧೀನಂ ಮತ್ತು ತಂಬೀರನ್ ಮಹಾಸ್ವಾಮಿ, ಮದ್ರಾಸ್ ಹೈಕೋರ್ಟ್ ಮಧುರೈ ವಿಭಾಗೀಯ ಪೀಠದ ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್, ಸತ್ಯಸಾಯಿ ವಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎನ್ ನರಸಿಂಹಮೂರ್ತಿ ಮತ್ತಿತರರು ಇದ್ದರು.
ನೆಮ್ಮದಿ ಬದುಕು ಸನಾತನ ಸಂಸ್ಕೃತಿ ತಿರುಳು
ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿ, ಪ್ರಜಾ, ಸದಾಚಾರಗಳ ರಕ್ಷಣೆಯೇ ಧರ್ಮ. ಎಲ್ಲದಕ್ಕಿಂತ ಹೆಚ್ಚಾಗಿ ಅವರವರ ಕರ್ತವ್ಯಗಳನ್ನು ಶ್ರದ್ಧೆಯಿಂದ ಸವಾಜದ ಒಳಿತಿಗಾಗಿ ಶ್ರಮಿಸುವುದೇ ಪರಮ ಶ್ರೇಷ್ಠ ಧರ್ಮ. ಎಲ್ಲರಿಗೂ ಸವಾನ ಅವಕಾಶ ನೀಡಿ, ನೆಮ್ಮದಿಯಿಂದ ಬದುಕು ನಡೆಸುವ ಪರಿಕಲ್ಪನೆಯೇ ಸನಾತನ ಸಂಸ್ಕೃತಿಯ ತಿರುಳು ಎಂದರು.
ವಿವಿಧ ಕಾರ್ಯಕ್ರಮ
ಯಾಗಶಾಲೆಯಲ್ಲಿ ಆಗಮಿಕ ಪಂಡಿತರಿಂದ ಹೋಮ, ದುರ್ಗಾರಾಧನೆ ನಡೆಯಿತು. ಕಲಾ ತಂಡದಿಂದ ತಾಲ್ ್ರೆ, ರಿದಮ್ ರೀ ಇಮೇಜಡ್ ಪ್ರದರ್ಶನ ಗಮನ ಸೆಳೆಯಿತು. ನವರಾತ್ರಿ ಹಬ್ಬದ ಮೊದಲಿನಿಂದಲೂ ಆಧ್ಯಾತ್ಮಿಕ ಸೇವಾ ಚಟುವಟಿಕೆಯೊಂದಿಗೆ ಸಾಂಸ್ಕೃತಿಕ ಕಲಾ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಅನುರಾಧಾ ವಿಕ್ರಾಂತ್ ತಂಡದಿಂದ ನೃತ್ಯ, ಸಿದ್ಧಾರ್ಥ ಬೆಳಮನು ಕೊಳಲು ವಾದನ, ಸತ್ಯಸಾಯಿ ಮಾನವ ಅಭ್ಯುದಯ ಸಂಸ್ಥೆಯ ದೇವಿ ಮಂಗಳಂ, ಮಾನಸ್ವಿನಿ ಅವರಿಂದ ಮಾತೆ ಸಂದೇಶಾತ್ಮಕ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಯಿತು.
ತಾಲೂಕಿನ ಮುದ್ದೇನಹಳ್ಳಿಯಲ್ಲಿನ ಸತ್ಯಸಾಯಿ ಪ್ರೇವಾಮೃತಂ ಸಭಾಭವನದಲ್ಲಿ ಶ್ರೀ ಸತ್ಯಸಾಯಿ ವಾನವ ಅಭ್ಯುದಯ ವಿಶ್ವ ವಿದ್ಯಾಲಯದ ಆವಿಷ್ಕಾರ ಮತ್ತು ಸಂರಕ್ಷಣಾ ಪೀಠದಿಂದ ಇಬ್ಬರು ಉದಯೋನ್ಮುಖ ಕೃಷಿ ಸಂಶೋಧನಾ ರೈತರಿಗೆ ಪುರಸ್ಕಾರ ನೀಡಲಾಯಿತು. 2022 ರಲ್ಲಿ ವಿಶ್ವವಿದ್ಯಾಲಯದ ಅಧೀನದಲ್ಲಿ ಸ್ಥಾಪಿತಗೊಂಡ ಆವಿಷ್ಕಾರ ಮತ್ತು ಸಂರಕ್ಷಣಾ ವಿಭಾಗವು ನವೋದ್ಯಮಗಳ ಪ್ರೋತ್ಸಾಹ, ಉದ್ಯೋಗಾವಕಾಶಗಳ ಸೃಷ್ಟಿ, ಸವಾಜದಲ್ಲಿ ಅವಗಾಹನೆಗೆ ಒಳಗಾಗಿರುವ ಕ್ಷೇತ್ರವನ್ನು ಸುಧಾರಿಸುವ ಧ್ಯೇಯ ಹೊಂದಿದೆ. ಈ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವ 88 ಪ್ರಕಾರಗಳ ಅರ್ಜಿ ಪರಿಶೀಲಿಸಿ, ಇಬ್ಬರಿಗೆ ಪುರಸ್ಕಾರ ನೀಡಿದೆ.
ರೈತ ಪುರಸ್ಕಾರದ ಸಾಧಕರು
85 ದೇಶಗಳಿಂದ 800 ಬಗೆಯ ವಿದೇಶಿ ಹಣ್ಣುಗಳ ತಳಿಗಳನ್ನು ತೋಟದಲ್ಲಿ ಸಂಸ್ಕರಿಸಿ, ಭಾರತಕ್ಕೆ ವಿದೇಶಿ ಹಣ್ಣುಗಳ ಪರಿಚಯಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಂಜದ ಅನಿಲ್ ಬೆಳಂಜಾ ಹಾಗೂ ಕೃಷಿ ಕ್ಷೇತ್ರದಲ್ಲಿ ಹೊಸ ರೀತಿಯ ಜೈವಿಕ ಗೊಬ್ಬರ ಜೀವಾಮೃತದ ಆವಿಷ್ಕಾರ ಮತ್ತು ಸುಲಭ ದರದ ಕೃಷಿ ಯಂತ್ರಗಳ ಸಂಶೋಧನೆಗಾಗಿ ಕಲಬುರಗಿ ಜಿಲ್ಲೆಯ ಶರಣಬಸಪ್ಪ ಪಿ. ಪಾಟೀಲ್ ಪುರಸ್ಕಾರ ಪಡೆದರು.