ಜಮಖಂಡಿ ನಗರದ ಕಾನಿಪ ಸಂಘದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸತ್ಯಕಾಮ ಪ್ರತಿಷ್ಠಾನದ ಸದಸ್ಯ ಆರ್.ಪಿ.ನ್ಯಾಮಗೌಡ ಮಾತನಾಡಿದರು. ಪವನ ಶಾಹಪುರ, ಸಂಜು ಮಲಘಾನ ಇದ್ದಾರೆ. 
ಜಿಲ್ಲೆ

7 ರಂದು ಸತ್ಯಕಾಮರ ಜನ್ಮಾರಾಧನೆ

Vijayapura - Desk - Gurappa Lokuri

ಜಮಖಂಡಿ: ತಾಲೂಕಿನ ಕಲ್ಲಹಳ್ಳಿಯ ಸುಮ್ಮನೆಯಲ್ಲಿ ಸತ್ಯಕಾಮ ಪ್ರತಿಷ್ಠಾನದ ಆಶ್ರಯದಲ್ಲಿ ಜು.7 ರಂದು ಬೆಳಗ್ಗೆ 10.30 ರಿಂದ ಸತ್ಯಕಾಮರ 104ನೇ ಜನ್ಮಾರಾಧನೆ ನಿಮಿತ್ತ ಬುದ್ಧದರ್ಶನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರತಿಷ್ಠಾನದ ಕಾರ್ಯಕಾರಿಣಿ ಸದಸ್ಯ ಆರ್.ಪಿ. ನ್ಯಾಮಗೌಡ ತಿಳಿಸಿದರು.

ನಗರದ ಕಾನಿಪ ಸಂಘದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬೆಂಗಳೂರಿನ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ, ಶತಾವಧಾನಿ ಡಾ.ಆರ್. ಗಣೇಶ್, ಪತ್ರಕರ್ತ ಅಜಿತ್ ಹನುಮಕ್ಕನವರ, ಉಡುಪಿ ಪತ್ರಕರ್ತ ಶ್ರೀಕಾಂತ ಕಾರ್ಕಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಕ್ತ ಸಂವಾದ ನಡೆಸಲಿದ್ದಾರೆ ಎಂದರು.

ಶಿವಮೊಗ್ಗದ ನೌಷಾದ್ ಹರ್ಲಾಪುರ್, ನಿಷಾದ್ ಹರ್ಲಾಪುರ್ ಹಿಂದುಸ್ತಾನಿ ಶಾಸೀಯ ಗಾಯನ, ವಚನ, ದಾಸವಾಣಿ, ಅಭಂಗವಾಣಿ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.

ಪವನ ಶಾಹಪುರ, ಸಂಜು ಮಲಘಾನ ಇದ್ದರು.