ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಮದ ಹರೀಶ್‌ಶೆಟ್ಟಿ ಮತ್ತು ಉಮೇಶ್‌ಗೌಡ ಎಂಬುವವರು ಕಾಡಾನೆ ದಾಳಿಗೆ ಮೃತರಾಗಿದ್ದು, ಅವರ ಕುಟುಂಬಗಳಿಗೆ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ, ಕಾಡಾನೆ ದಾಳಿಗೆ ತುತ್ತಾದ ಓರ್ವರು ಸ್ಥಳೀಯ ರೈತರಾದರೆ, ಇನ್ನೋರ್ವರು ಬಿಜೆಪಿ ಶೃಂಗೇರಿ ವಿಧಾನಸಭಾ ಶಕ್ತಿ ಕೇಂದ್ರದ ಅಧ್ಯಕ್ಷರಾಗಿದ್ದರು. ಹೀಗಾಗಿ ನೊಂದ ಎರಡು ಕುಟುಂಬಗಳಿಗೆ ಸಾಂತ್ವಾನ ತಿಳಿಸಿ, ತಲಾ ೫೦ ಸಾವಿರ ರೂ. ನೀಡಲಾಯಿತು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಶೃಂಗೇರಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ವಿಎಚ್‌ಪಿ ಮುಖಂಡ ಶ್ಯಾಮ್ ವಿ.ಗೌಡ, ಮುಖಂಡರಾದ ದಿನೇಶ್, ಅರುಣ್‌ಕುಮಾರ್ ಇದ್ದರು.