ಜಿಲ್ಲೆ

ಬಿಎಸ್‌ಎಂಎಸ್ ಕೋರ್ಸ್‌ಗೆ ಸಾತ್ವಿಕ ಆಯ್ಕೆ

ಕುಮಟಾ: ತಿರುವನಂತಪುರಂನಲ್ಲಿರುವ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್‌ಇಆರ್)ಯಲ್ಲಿ ಐದು ವರ್ಷದ ಬಿಎಸ್‌ಎಂಎಸ್ ಸಂಯುಕ್ತ ಕೋರ್ಸ್‌ಗೆ ಪಟ್ಟಣದ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾತ್ವಿಕ ಭಟ್ ಆಯ್ಕೆಯಾಗಿದ್ದಾನೆ ಎಂದು ವಿಧಾತ್ರಿ ಅಕಾಡೆಮಿ ಸಹಸಂಸ್ಥಾಪಕ ಗುರುರಾಜ ಶೆಟ್ಟಿ ತಿಳಿಸಿದ್ದಾರೆ.

ಭಾರತದಾದ್ಯಂತ ಒಟ್ಟು 7 ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳಿದ್ದು, ಐದು ವರ್ಷಗಳ ಸಂಯುಕ್ತ ಕೋರ್ಸ್ ಹಾಗೂ ಮೂರು ವರ್ಷಗಳ ಬಿ.ಎಸ್. ಕೋರ್ಸ್‌ಗಳಿದೆ. ಇದಕ್ಕೆ ಜೆಇಇ ಅಡ್ವಾನ್ಸ್ ಹಾಗೂ ಐಐಎಸ್‌ಇಆರ್ ಆಪ್ಟಿಟ್ಯೂಡ್ ಪರೀಕ್ಷೆ(ಐಎಟಿ) ಮುಖಾಂತರ ಪ್ರವೇಶಾತಿ ಇರುತ್ತದೆ.

ಪ್ರತಿ ವರ್ಷ ಸುಮಾರು 4 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರೂ ಸಾವಿರದ ಎಂಟು ನೂರು ವಿದ್ಯಾರ್ಥಿಗಳು ಮಾತ್ರ ಕೋರ್ಸ್‌ಗೆ ಆಯ್ಕೆಯಾಗುತ್ತಾರೆ. ಇಂತಹ ಸಂಸ್ಥೆಯ ಅಧ್ಯಯನಕ್ಕೆ ಕುಮಟಾ ತಾಲೂಕಿನ ವಿದ್ಯಾರ್ಥಿ ಸಾತ್ವಿಕ ಭಟ್ ಆಯ್ಕೆಯಾಗಿರುವುದು ಗಮನಾರ್ಹ ಸಾಧನೆ ಎಂದು ಗುರುರಾಜ ಶೆಟ್ಟಿ ಬಣ್ಣಿಸಿದ್ದಾರೆ.