ಲಿಂಗಸುಗೂರು: ಮಾನಸಿಕ ಒತ್ತಡ ನಿವಾರಣೆಗೆ ಯೋಗಾಭ್ಯಾಸ ಮತ್ತು ಪುರಾತನ ಆಯುರ್ವೇದ ಪದ್ಧತಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಯೋಗಗುರು ಬಸವರಾಜ ಹಿರೇಮಠ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಸರ್ಕಾರಿ ಆಯುಷ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದನ್ನು ಓದಿ:ಅಲೋಪತಿಗೆ ಸಮನಾಗಿ ಆಯುರ್ವೇದ ಬೆಳೆಯಬೇಕು; ಬಿಜೆಪಿ ಅವಧಿಯಲ್ಲಿ ಆಯುಷ್ ಇಲಾಖೆ ಆರಂಭ; ಬಸವರಾಜ ಬೊಮ್ಮಾಯಿ ಹೇಳಿಕೆ
ಭಾರತೀಯ ಸನಾತನ ಪರಂಪರೆಯ ಶ್ರೇಷ್ಠ ವಿದ್ಯೆಗಳಲ್ಲಿ ಯೋಗವೂ ಒಂದಾಗಿದ್ದು, ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆಯಾಗಿದ್ದು, ಇತ್ತೀಚಿನ ವರ್ಷಗಳಿಂದ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗಾಭ್ಯಾಸ ನಿತ್ಯ ರೂಢಿಸಿಕೊಂಡಿದ್ದು, ಯೋಗಾಭ್ಯಾಸದ ಜತೆಗೆ ಸಾತ್ವಿಕ ಆಹಾರ ಸೇವನೆಯಿಂದ ಆರೋಗ್ಯ ಮತ್ತು ಆಯುಷ್ಯ ವೃದ್ಧಿಯಾಗಲಿದೆ ಎಂದು ಹೇಳಿದರು.
ಪ್ರಾಚಾರ್ಯ ಡಾ.ರಾಜಶೇಖರ ಹಿರೇಮಠ, ಡಾ.ಡಿ.ಎಚ್.ಹುಲ್ಲೂರು, ಡಾ.ಹೀರಾಬಾಯಿ, ಮೇಲ್ವಿಚಾರಕಿಯರಾದ ನಾಗರತ್ನಾ, ಅನುಸೂಯ ಇತರರಿದ್ದರು.